ಕುಕ್ಕೇಡಿ: ಸೊಂಟನೋವಿನಿಂದ ಬಳಲಿ ನಡೆಯಲಾಗದ ಸ್ಥಿತಿಯಲ್ಲಿರುವ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಸುಶ್ಮಿತಾ ಅವರ ಚಿಕಿತ್ಸೆಗೆ ದಾನಿಗಳ ನೆರವು ಬೇಕಾಗಿದೆ.
ಕುಕ್ಕೇಡಿ ಗ್ರಾಮದ ಇಂದ್ರಂಡ ಮನೆ ನಿವಾಸಿ ಸುರೇಶ್ ಮತ್ತು ಪ್ರೇಮಾ ದಂಪತಿಯ ಪುತ್ರಿ ಸುಶ್ಮಿತಾ (28) ಅವರು ಅಪರೂಪದ ಖಾಯಿಲೆ ಕೋನಸ್ ಮೆಡುಲ್ಲಾರಿಸ್ ನಿಂದ ಬಳಲುತ್ತಿದ್ದಾರೆ.
ಈಕೆಯ ತಂದೆ ಗೋಳಿಯಂಗಡಿ ಖಾಸಗಿ ಕಾಲೇಜು ಒಂದರಲ್ಲಿ ಗುಮಸ್ತ ಕೆಲಸ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ಸೊಂಟನೋವಿನಿಂದ ಬಳಲುತ್ತಿದ್ದ ಸುಶ್ಮಿತಾ ಅವರಿಗೆ ನಿರಂತರ ಚಿಕಿತ್ಸೆಯ ಬಳಿಕ ಕೊನೆಗೆ ಎಂಆರ್ಐ ಸ್ಕಾನಿಂಗ್ ಮಾಡಲು ವೈದ್ಯರು ಸೂಚಿಸಿದ್ದು, ಕೋನಸ್ ಮೆಡುಲ್ಲಾರಿಸ್ ಎಂಬ ಗಂಭೀರ ಖಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಇದೀಗ ದಂಪತಿಯ ಮಗಳ ಜೀವ ಉಳಿಸಲು ದಾನಿಗಳ ಮೊರೆ ಹೋಗಿದ್ದು, ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಪ್ರೇಮಾ: 9972615902, ಸುರೇಶ್: 7760163550.






