ವೇಣೂರು: ಬಹುವರ್ಷಗಳಿಂದ ಅಜೀರ್ಣವಸ್ಥೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ವೇಣೂರು ವಲಯ ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ 24ರಂದು ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಸಾನಿಧ್ಯಗಳ ಪುನರ್ ಪ್ರತಿಷ್ಠೆಯ ಪೂರ್ವಭಾವಿಯಾಗಿ ನಾಗದೇವರುಗಳ ಶಿಲಾಮಯ ಬಿಂಬಗಳನ್ನು ಇತ್ತೀಚೆಗೆ ವೈಧಿಕ ವಿದಿ ವಿಧಾನದಲ್ಲಿ ಜಲಾಧಿವಾಸ ಮಾಡಲಾಗಿತ್ತು.
ಕುತ್ಲೂರು ಶಿಲ್ಪಕಲಾ ಕೇಂದ್ರದಿಂದ ತೆರೆದ ವಾಹನದಲ್ಲಿ ನಾಗದೇವರುಗಳ ಶಿಲಾಮಯ ಬಿಂಬಗಳನ್ನು ಮಂಜನಬೆಟ್ಟುವಿಗೆ ತರಲಾಗಿತ್ತು.
ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ಇದೀಗ ಮಾರೂರು ಖಂಡಿಗ ವೇ.ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ಮೇ 24ರಂದು ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಮೇ 23ರಂದು ಸಂಜೆ ಆಲಯ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ವಾಸ್ತುಪೂಜೆ, ಸುದರ್ಶನ ಹೋಮ, ದಿಗ್ಬಲಿ, ಪೀಠಾದಿವಾಸ ಮುಂತಾದ ವೈದಿಕ ವಿಧಾನಗಳು ನಡೆಯಲಿದೆ. ಉಪಹಾರದ ವ್ಯವಸ್ಥೆ ಇದೆ.
ಮೇ 24ರಂದು ಬೆಳಿಗ್ಗೆ 7-00 ಗಂಟೆಯಿಂದ ಕಲಶ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶ, ಪ್ರದಾನ ಹೋಮ ಬಳಿಕ ಪರಿವಾರ ನಾಗದೇವರುಗಳ ಪುನಃ ಪ್ರತಿಷ್ಠೆ ನಡೆಯಲಿದೆ. ಆ ಬಳಿಕ ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಜೀರ್ಣೊದ್ಧಾರ ಸಮಿತಿ ಗೌರವಾಧ್ಯಕ್ಷರಾದ ಜಿನರಾಜ ಜೈನ್ ಪದ್ಮಾಂಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





