ಹಿಂದೂ ಸಂಪ್ರದಾಯ ಪ್ರಕಾರ ತುಳಸಿ ಗಿಡವನ್ನು ಲಕ್ಷ್ಮಿದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ನಮ್ಮ ಧಾರ್ಮಿಕ ಮಹತ್ವವನ್ನಷ್ಟೇ ಹೊಂದಿಲ್ಲ, ಮನೆಯಲ್ಲಿ ಕೇವಲ ಸಕಾರಾತ್ಮಕ ಶಕ್ತಿ ಮಾತ್ರವಲ್ಲದೆ ಶುದ್ಧತೆಯನ್ನು ಕೂಡ ಹೆಚ್ಚಿಸುವ ಗಿಡ ಎಂದೂ ವಾಸ್ತು ತಜ್ಞರ ಅಭಿಪ್ರಾಯ ಆಗಿದೆ. ಆದರೆ ಸರಿಯಾದ ಆರೈಕೆ ಮಾಡಿದರು ತುಳಸಿ ಗಿಡ ಏಕಾಏಕಿ ಒಣಗಲು ಅಥವಾ ಎಲೆಗಳು ಉದುರಲು ಶುರುವಾದರೆ, ಇದನ್ನು ಸಾಧಾರಣ ಸಮಸ್ಯೆ ಎಂದು ನಿರ್ಲಕ್ಷಿಸಬಾರದು ಎಂದು ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರು ಎಚ್ಚರಿಕೆ ನೀಡುತ್ತಾರೆ.
ತುಳಸಿ ಬಾಡುವುದು ಅಶುಭ ಎಂದು ಹೇಳುತ್ತಾರೆ?
ಜ್ಯೋತಿಷ್ಯ ಪ್ರಕಾರ ತುಳಸಿ ಗಿಡವು ಬುಧ ಗ್ರಹದೊಂದಿಗೆ ಸಂಬಂಧ ಹೊಂದಿರುತ್ತದೆ. ಈ ಗಿಡ ಬಾಡಲು ಶುರುವಾದರೆ ಬುಧನ ಸ್ಥಿತಿ ದುರ್ಬಲವಾಗಿದೆ ಎಂಬ ಸೂಚನೆ ಆಗಿರುತ್ತದೆ. ಬುಧನು ಬುದ್ಧಿವಂತಿಕೆ, ಸಂವಹನ, ವ್ಯವಹಾರ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗ್ರಹವಾಗಿರುವುದರಿಂದ, ಅದರ ದುರ್ಬಲತೆ ಜೀವನದಲ್ಲಿ ವಿವಿಧ ರೀತಿಯ ಅಡೆತಡೆಗಳನ್ನು ತಂದೊಡ್ಡಬಹುದು.
ಪಿತೃ ದೋಷದ ಸೂಚನೆ?
ಮನೆಯಲ್ಲಿ ಸಮೃದ್ದವಾಗಿ ಬೆಳೆಯಬೇಕಾದ ತುಳಸಿ ಗಿಡವು ಪದೆ ಪದೆ ಒಣಗುತ್ತಿದ್ದರೆ ಅದನ್ನು ಪಿತೃ ದೋಷದ ಒಂದು ಬಲವಾದ ಮುನ್ಸೂಚನೆ ಎಂದು ಶಾಸ್ತ್ರಗಳಲ್ಲಿ ಪರಿಗಣಿಸಲಾಗುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗದೇ ಇದ್ದಾಗ ಅಥವಾ ಅವರ ಅಸಮಾಧಾನದ ಫಲವಾಗಿ ಮನೆಯಲ್ಲಿ ಈ ಕೆಳಗಿನ ಸಮಸ್ಯೆಗಳು ತೆಲೆದೂರಬಹುದು ಎಂಬ ನಂಬಿಕೆ ಇದೆ.
* ಆರ್ಥಿಕ ಮುಗ್ಗಟ್ಟು: ಎಷ್ಟೇ ಸಂಪಾದನೆ ಮಾಡಿದರು ಕೈಯಲ್ಲಿ ಹಣ ಉಳಿಯದೆ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು.
* ಮಾನಸಿಕ ಒತ್ತಡ: ಕುಟುಂಬದ ಸದಸ್ಯರಲ್ಲಿ ನೆಮ್ಮದಿ, ಆತಂಕ ಮತ್ತು ಭಯ ಭೀತಿಯ ಕೊರತೆ ಉಂಟಾಗುತ್ತದೆ.
* ಅಭಿವೃದ್ದಿಗೆ ಹಿನ್ನಡೆ: ಯಾವುದೇ ಶುಭ ಕಾರ್ಯಗಳು ಅಥವಾ ಕೆಲಸಗಳಿಗೆ ಅಡೆತಡೆಯು ಹೆಚ್ಚಾಗಬಹುದು
* ಸತತ ಕಲಹ: ಸಣ್ಣ ಪುಟ್ಟ ವಿಷಯಗಳಿಗೂ ಮನೆಯವರ ನಡುವೆ ವೈಮನಸ್ಸು ಮತ್ತು ಜಗಳಗಳು ಉಂಟಾಗುತ್ತವೆ. ತುಳಸಿ ಗಿಡ ಇಡುವ ಜಾಗ ತುಳಸಿ ಗಿಡ ವಾಸ್ತು ಪ್ರಕಾರ ಮೇಲ್ಚಾವಣಿಯಲ್ಲಿ ಇಡುವುದು ತಪ್ಪು. ಇದರಿಂದ ಬುಧನ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡುವುದು ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಮನೆಯ ಸಮೃದ್ದಿ, ಶಾಂತಿ ಮತ್ತು ಆರ್ಥಿಕತೆ ಹೆಚ್ಚಾಗಬಹುದು ಎಂದು ವಾಸ್ತು ತಜ್ಞರ ನಂಬಿಕೆ ಆಗಿದೆ.
ತುಳಸಿ ಗಿಡದ ಸಂರಕ್ಷಣೆ ಮತ್ತು ಪಿತೃ ದೋಷ ನಿವಾರಣೆಗೆ ಸರಳ ಉಪಾಯಗಳು
ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಮತ್ತು ತುಳಸಿ ಗಿಡ ಸೊಂಪಾಗಿ ಬೆಳೆಯಲು ಈ ಕೆಳಗಿನ ಅಗತ್ಯ ಕ್ರಮಗಳನ್ನು ಅನುಸರಿಸಿ
* ಸರಿಯಾದ ದಿಕ್ಕಿನ ಆಯ್ಕೆ: ತುಳಸಿ ಗಿಡವನ್ನು ಯಾವಾಗಲೂ ಮನೆಯ ಈಶಾನ್ಯ (ಈಶನ್ಯ) ಮೂಲೆ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ.
* ನಿತ್ಯ ಪೂಜೆ: ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುವಾಗ ಅದಕ್ಕೆ ಸ್ವಲ್ಪ ಗಂಗಾಜಲ ಸೇರಿಸಿ. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಗಿಡದ ಬಳಿ ಹಣತೆ ಹಚ್ಚಿ ಭಕ್ತಿಯಿಂದ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರವನ್ನು ಪ್ರಾರ್ಥಿಸಿ. ತುಳಸಿ ಗಿಡವನ್ನು ಯಾವಾಗಲೂ ಸ್ವಚ್ಛ ಸ್ಥಳದಲ್ಲಿ ಇಟ್ಟು, ಮುಟ್ಟುವ ಮುನ್ನ ಕೈ ತೊಳೆಯುವುದು ಉತ್ತಮ. ಅನಾವಶ್ಯಕವಾಗಿ ಎಲೆಗಳನ್ನು ಕೀಳುವುದನ್ನು ಮಾಡಬಾರದು. ಗಿಡ ಸಂಪೂರ್ಣವಾಗಿ ಒಣಗಿದರೆ, ಗೌರವದಿಂದ ತೆಗೆದು ಹೊಸ ಗಿಡವನ್ನು ನೆಡುವುದು ಒಳಿತು.





