ವೇಣೂರು: ಠಾಣಾ ವ್ಯಾಪ್ತಿಯ ನಿಟ್ಟಡೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳವುಗೈದ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಕುಕ್ಕೇಡಿ ಗ್ರಾಮದ ನಿವಾಸಿ ಸಂಪತ್ ಕುಮಾರ್ ಎಂಬವರ ಬೈಕ್ ಕಳ್ಳತನವಾಗಿದೆ. ಇವರು ನ೧೦ ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಪೆಟ್ರೋಲ್ ಮುಗಿದ ಕಾರಣ ಬೈಕ್ ಅನ್ನು ನಿಟ್ಟಡೆ ಗ್ರಾಮದ ಪಾಣೂರು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು ನ ೧೧ರಂದು ಬೆಳಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಅಲ್ಲಿರಲಿಲ್ಲ. ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಉಜಿರೆಯಲ್ಲಿ ಬೈಕ್ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರುವ ವೇಳೆಗೆ ಬೈಕ್ ಕಳ್ಳತನವಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.





