ಚೆನ್ನೈ, ಏ. 3: ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಚುನಾವಣಾ ಸಮಿತಿಯು 27 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹಲವಾರು ಅನುಭವಿ ನಾಯಕರು ಮತ್ತು ಸ್ಥಳೀಯ ಪ್ರಭಾವ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕೇಂದ್ರ ಸಚಿವರಿಂದ ಹಿಡಿದು ಮಾಜಿ ರಾಜ್ಯಪಾಲರವರೆಗೆ ಪ್ರಮುಖ ನಾಯಕರ ಹೆಸರಿದೆ, ಆದರೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಹೆಸರೇ ಇಲ್ಲ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳು ರಾಜಕೀಯದಲ್ಲಿ ಬಿಜೆಪಿಯ ರಾಜಕೀಯ ಭರವಸೆಯನ್ನು ಹೆಚ್ಚಿಸಿದ ಅಣ್ಣಾಮಲೈ ಅವರನ್ನು ಚುನಾವಣಾ ಕ್ಷೇತ್ರದಿಂದ ದೂರವಿಡುವ ನಿರ್ಧಾರವು ಆಶ್ಚರ್ಯಕರವಾಗಿದೆ.
ದೇಶ ಮುಂದುವರಿಯುತ್ತಿರುವಾಗ, ವಿಫಲ, ಅಹಂಕಾರಿ ಮತ್ತು ಸ್ವಾರ್ಥಪರ ಡಿಎಂಕೆ ಸರ್ಕಾರದಿಂದ ತಮಿಳುನಾಡು ಹಿಂದುಳಿದಿದೆ. ನಾನು ಒಬ್ಬ ಕಾರ್ಯಕರ್ತನಾಗಿ ನಮ್ಮ ಎಲ್ಲಾ ಬಿಜೆಪಿ ಮತ್ತು ಇತರ ಎನ್ ಡಿಎ ಅಭ್ಯರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಪ್ರಚಾರ ಮಾಡುತ್ತೇನೆ, ಚುನಾವಣೆಯಲ್ಲಿ ಎನ್ ಡಿಎ 210 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದು ಅಣ್ಣಾಮಲೈ ಪೋಸ್ಟ್ ಮಾಡಿದ್ದಾರೆ.





