ಬೆಳ್ತಂಗಡಿ: 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಬೆಳ್ತಂಗಡಿ ಮೂಲದ ಇಬ್ಬರು ಪೊಲೀಸರು ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ಕಚೇರಿಯ ಹೆಡ್ ಕಾನ್ಟೇಬಲ್ ವಿಜಯ ಕುಮಾರ್ ರೈ ಆಯ್ಕೆ ಹಾಗೂ ಮೂಲತಃ ಪಡಂಗಡಿಯ ಪ್ರಸ್ತುತ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಗಿರುವ ಇರ್ಷಾದ್ ಪಿ. ಅವರು ಈ ಪುರಸ್ಕಾರಕ್ಕೆ ಆಯ್ಕೆಯಾದವರು.
ವಿಜಯ ಕುಮಾರ್ ರೈ ಅವರು ವೇಣೂರು ಸೇರಿದಂತೆ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ಸಹಾಯಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ ಸೀತಾರಾಮ ರೈ ಅವರ ಪುತ್ರ, ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕಿಯಾಗಿರುವ ಪತ್ನಿ ಅನುಷಾ ಹಾಗೂ ಪುತ್ರ ಅಯ್ಯುಕ್ತ ಜೊತೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಯರ್ಡೂರಿನಲ್ಲಿ ವಾಸವಾಗಿದ್ದಾರೆ.
ಇರ್ಷಾದ್ ಪಿ. ಇವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಹಾಮದ್ ಮತ್ತು ಹಾಜಿರಾ ದಂಪತಿಗಳ ಮೂರನೇ ಪುತ್ರ. ಇವರು ಮಂಗಳೂರು ವಿಶೇಷ ಘಟಕ, ಉಪ್ಪಿನಂಗಡಿ, ಬಂಟ್ವಾಳ ನಗರ ಠಾಣೆಗಳಲ್ಲಿ ಕ್ರೈಂ ಬ್ರಾಂಚ್ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಜನಸ್ನೇಹಿ ಪೊಲೀಸ್ ಎಂದೇ ಖ್ಯಾತಿ ಪಡೆದಿದ್ದಾರೆ.





