ಹೊಸಂಗಡಿ: ಸಾಧನಶ್ರೀ ಮಹಿಳಾ ಮಂಡಳಿ ಪಡ್ಡಂದಡ್ಕ ಇದರ ಆಶ್ರಯದಲ್ಲಿ ಪಡ್ಡಂದಡ್ಕದ ಮಂಜುಶ್ರೀ ಭಜನಾ ಮಂದಿರದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಭಾ ಅರುಣ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಹಿಳಾ ಮಂಡಲದ ಕಾರ್ಯದರ್ಶಿಯಾದ ಶ್ರೀಮತಿ ನಳಿನಾಕ್ಷಿ ಸುಧಾಕರ್ ಇವರು ಮಹಿಳಾ ಶಕ್ತಿಯ, ಸಂಘಟನೆಯ ಕುರಿತು ಕೆಲವು ತಾತ್ವಿಕ ಕಥೆಗಳನ್ನು ಹೇಳುವ ಮೂಲಕ ಮಹಿಳೆಯರ ಹಕ್ಕು ಕರ್ತವ್ಯಗಳ ಬಗ್ಗೆ ಮಾತನಾಡಿದರು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕೆಲವು ಆಟ ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಯಂತಿ ಹೆಗ್ಡೆ ಸ್ವಾಗತಿಸಿ, ಮಂಜುಳಾ ವಂದಿಸಿದರು. ರೇಷ್ಮಾ ಮತ್ತು ಅಶ್ವಿನಿ ನಿರೂಪಿಸಿದರು.





