ಪ್ರಧಾನ ಸಂಚಾಲಕರಾಗಿ ನಿತ್ಯಾನಂದ ಎನ್. ನಾವರ, ಗೌರವಾಧ್ಯಕ್ಷರಾಗಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ, ಅಧ್ಯಕ್ಷರಾಗಿ ನಾಟಿವೈದ್ಯರಾದ ಬೇಬಿ ಪೂಜಾರಿ ಪುಣ್ಕೆತ್ಯಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ನೇಮಕ
ಅಳದಂಗಡಿ: ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ನೂತನ ಯಕ್ಷಗಾನ ಬಯಲಾಟ ಸಮಿತಿಯನ್ನು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಫೆ. ೨೩ ರಂದು ರಚಿಸಲಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಗೆಜ್ಜೆಗಿರಿಯ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ಹಲವಾರು ಗ್ರಾಮ ಸಮಿತಿಗಳ ಉಸ್ತುವಾರಿ ಹೊಂದಿರುವುದರಿಂದ ಮತ್ತು ಗೆಜ್ಜೆಗಿರಿಯ ಹಿರಿಯ ಕಿರಿಯರ ಸಹಕಾರದಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಬೆನ್ನಲ್ಲಿ ಈ ಪ್ರಥಮ ಬಯಲಾಟ ಸಮಿತಿ ಮಾಡುವ ತೀರ್ಮಾನಕ್ಕೆ ಬಂದಿದ್ದರು.
ಅದರಂತೆ ನೂತನ ಗೆಜ್ಜೆಗಿರಿ ಬಯಲಾಟ ಸಮಿತಿಯನ್ನು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಪಿ.ಹೆಚ್. ಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.
೨೦೨೬-೨೦೨೭ ನೇ ಸಾಲಿಗೆ ನೂತನ ಸಮಿತಿಯಲ್ಲಿ ಪ್ರಧಾನ ಸಂಚಾಲಕರಾಗಿ ನಿತ್ಯಾನಂದ ಎನ್ .ಯೋಗಕ್ಷೇಮ ನಾವರ , ಗೌರವಾಧ್ಯಕ್ಷರಾಗಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ನೊಚ್ಚ, ಪ್ರಥಮ ವರ್ಷದ ಅಧ್ಯಕ್ಷರಾಗಿ ನಾಟಿವೈದ್ಯರಾದ ಬೇಬಿ ಪೂಜಾರಿ ಪುಣ್ಕೆತ್ಯಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ , ನಾವರ , ಉಪಾಧ್ಯಕ್ಷರುಗಳಾಗಿ ವೀರೇಂದ್ರ ಕುಮಾರ್ ಜೈನ್ ರಾಜಪಾದೆ, ಸುಪ್ರೀತ್ ಜೈನ್ ಅಳದಂಗಡಿ, ರತ್ನಾಕರ ಪೂಜಾರಿ, ರಾಜವರ್ಮ ಜೈನ್ ನಮನ ಅಳದಂಗಡಿ, ಹಿರಂತೊಟ್ಟು, ರವಿ ಪೂಜಾರಿ ಹಾರಡ್ಡೆ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ ಅಲೆಕ್ಕಿ, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಹಿಮರಡ್ಡ ನಾವರ, ಕೋಶಾಧಿಕಾರಿಯಾಗಿ ಶೇಖರ ಪೂಜಾರಿ ಬರಮೇಲು ಮತ್ತು ಸದಸ್ಯರಾಗಿ ರವಿಚಂದ್ರ ಭಟ್ ನಾವರ,
ಗಿರೀಶ್ ಕುಲಾಲ್ ಅಳದಂಗಡಿ, ರಮಾನಾಥ ಪಾದೆಮಾರಡ್ಡ, ಅಜಿತ್ ಕುಮಾರ್ ಪಂಚರತ್ನ, ಹರೀಶ್ ಕುಲಾಲ್ ದೇವರಗುಡ್ಡೆ, ಹರಿಣಾಕ್ಷಿ ಪಾಡಿಪಿಲ್ಯ, ಆನಂದ ಪೂಜಾರಿ ಮಣಿಕಂಠ ಪಿಲ್ಯ, ವಿಶ್ವನಾಥ ಬಂಗೇರ ಅಳದಂಗಡಿ,
ಸದಾನಂದ ಬಿ.ಕುದ್ಯಾಡಿ, ಅಶ್ವಥ್ ಸಾಲ್ಯಾನ್ ವರ್ಪಾಳೆ, ರಾಜೇಶ್ ಕುಲಾಲ್ ಬೈರೊಟ್ಟು ಹಾಗೂ ಸಹ ಸಂಚಾಲಕರು ಇನ್ನಿತರರನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ.
ಈ ಸಂದರ್ಭದಲ್ಲಿ ಗೆಜ್ಜೆಗಿರಿ ಮೇಳದ ವ್ಯವಸ್ಥಾಪಕರು ಹಾಗೂ ಪ್ರಸಂಗಕರ್ತ ನಿತಿನ್ ತೆಂಕಕಾರಂದೂರು ಭಾಗವಹಿಸಿದ್ದರು.
ಗೆಜ್ಜೆಗಿರಿ ಮೇಳದ ಬಯಲಾಟ ಸಮಿತಿ ಬೆಳ್ತಂಗಡಿ ತಾಲೂಕು ಮತ್ತು ಇಡೀ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ನಾವರದಲ್ಲಿ ಪ್ರಾರಂಭ ಮಾಡಲಾಗಿದೆ. ಈ ಪರಿಸರದಲ್ಲಿ ಯಕ್ಷಗಾನ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಂಘಟಕರು ಇರುವುದರಿಂದ ಇದನ್ನು ಮನಗಂಡು ಈ ಸಮಿತಿ ರಚಿಸಲಾಗಿದೆ.





