India vs Pakistan: ಫೆಬ್ರವರಿ 15, 2026 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಿನ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದಲ್ಲ, ಎರಡು ರೋಮಾಂಚಕ ಪಂದ್ಯಗಳಲ್ಲಿ ಸೆಣಸಾಡಲಿವೆ. ಪುರುಷರ ಟಿ20 ವಿಶ್ವಕಪ್ನಲ್ಲಿ ಹಿರಿಯ ತಂಡಗಳು ಕೊಲಂಬೊದಲ್ಲಿ ಮಹತ್ವದ ಪಂದ್ಯ ಆಡಿದರೆ, ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ನಲ್ಲಿ ಯುವ ಮಹಿಳಾ ತಂಡಗಳು ಬ್ಯಾಂಕಾಕ್ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ಒಂದೆಡೆ 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ಹಿರಿಯ ತಂಡಗಳು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಇನ್ನೊಂದೆಡೆ ಎರಡೂ ದೇಶಗಳ ಯುವ ಮಹಿಳಾ ತಂಡಗಳು ಅದೇ ದಿನ ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.





