ಬೆಂಗಳೂರು, ಜನವರಿ 28: ರಾಜ್ಯದೆಲ್ಲೆಡೆ ಏರ್ ಕ್ವಾಲಿಟಿ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಕೆಲ ತಿಂಗಳ ಹಿಂದೆಯೂ ಒಮ್ಮೆ ಬೆಂಗಳೂರಿನ ವಾಯ ಗುಣಮಟ್ಟ 200ಕ್ಕೇರಿತ್ತು. ನಂತರ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು. ಆದರೆ ಬೆಂಗಳೂರಿಗಿಂತಲೂ ಕಳಪೆ AQI ಮಂಗಳೂರಿನಲ್ಲಿ ದಾಖಲಾಗಿದ್ದು, ಆತಂಕ ಸೃಷ್ಟಿಸಿದೆ.
ಏಕಾಏಕಿ ಏರಿದ AQI
ಬೆಂಗಳೂರಿನ ಏರ್ ಕ್ವಾಲಿಟಿ 163 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೆ ಮಂಗಳೂರಿನ ವಾಯು ಗುಣಮಟ್ಟ 172 ಇದ್ದು, ಒದು ರಾಜಧಾನಿಗಿಂತ ಕಳಪೆಯಾಗಿದೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –163
- ಮಂಗಳೂರು-172
- ಮೈಸೂರು –162
- ಬೆಳಗಾವಿ – 118
- ಕಲಬುರ್ಗಿ-151
- ಶಿವಮೊಗ್ಗ – 160
- ಬಳ್ಳಾರಿ – 200
- ಹುಬ್ಬಳ್ಳಿ- 134
- ಉಡುಪಿ –167
- ವಿಜಯಪುರ –150
- ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+






