ವೇಣೂರು: ಕಾಶಿಪಟ್ಲ ಗ್ರಾಮವನ್ನು 24×7 ನೀರು ಪೂರೈಕೆಯ ಗ್ರಾಮವೆಂದು ಘೋಷಣೆ ಮಾಡುವ ಮೂಲಕ ಪ್ರತಿಯೊಬ್ಬ ಗ್ರಾಮಸ್ಥರಿಗೂ ರಂತರ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಲಾಗಿರುವುದು ಶ್ಲಾಘಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ರವಿವಾರ ಕಾಶಿಪಟ್ಣ ಗ್ರಾಮ ಪಂಚಾಯತ್ನ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಉದ್ಘಾಟನೆ, ಸಭಾಭವನ ಹಾಗೂ ಅನ್ನಛತ್ರದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರದ ಅನುದಾನದಲ್ಲಿ ಕಡಿತ
ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಸಾಂಪ್ರದಾಯಿಕವಾಗಿ ಕೇಂದ್ರದಿಂದ ಲಭಿಸಬೇಕಾದ ಅನುದಾನ ರಾಜ್ಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದು ಗ್ರಾಮೀಣ ಭಾಗದ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಆಯುಷ್ಮನ್ ಕರ್ನಾಟಕ ಆರೋಗ್ಯ ಯೋಜನೆಯಲ್ಲಿ ೬೦-೪೦ ಎಂದು ಹೇಳುತ್ತಿದ್ದರೂ ಕೇಂದ್ರದಿಂದ ಬರುವುದು ಕೇವಲ ೨೫ ಶೇ. ಮಾತ್ರ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದೇಶದಲ್ಲಿ ದೇವಾಲಯಗಳಿಗೆ ವಿಶೇಷಸ್ಥಾನವಿದೆ. ದೇವಾಲಯಗಳು ನಮ್ಮೊಳಗೆ ಒಗ್ಗಟ್ಟು ಮೂಡಿಸುವ ಕೇಂದ್ರ. ಅದರ ಅಭಿವೃದ್ಧಿಗೆ ಸಹಕಾರ ಡುವುದು ನಮ್ಮ ಜವಾಬ್ದಾರಿ. ಕೇಳ ದೇವಸ್ಥಾನದ ಅಭಿವೃದ್ಧಿ ಬಾಕಿಉಳಿದಿರುವ ರೂ. ೧೫ ಲಕ್ಷ ಅನುದಾನ ಹಾಗೂ ಹೆಚ್ಚುವರಿಯಾಗಿ ರೂ. ೧೦ ಲಕ್ಷ ಅನುದಾನ ಒದಗಿಸುತ್ತೇನೆ ಎಂದರು.
ಕಾಶಿಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ ಮೇಲ್ಚಾವಣಿಯನ್ನು ಸಚಿವರು ಉದ್ಘಾಟಿಸಿದರು. ವಿವಿಧ ಯೋಜನೆಯಡಿ ಬಿಡುಗಡೆಯಾದ ಹಕ್ಕುಪತ್ರಗಳವಿತರಣೆ ನಡೆಯಿತು. ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ಸಚಿವ ದಿನೇಶ್ ಗುಂಡೂರಾವ್, ಪಿ.ಕೆ. ರಾಜು ಪೂಜಾರಿ, ಫ್ರಾಂಕಿ ಪಿಂಟೋ, ಕೆಎಸ್ ಪುತ್ತುಮೋನು, ಬಿ. ಯೋಗೀಶ್, ಮಹಮ್ಮದ್ ಶಫಿದ್, ಅರುಣ್ ಕುಮಾರ್, ಆಶಾಲತಾ ಹಾಗೂ ಸೌಮ್ಯ ಅವರನ್ನು ಸನ್ಮಾಸಲಾಯಿತು.
ಕಟೀಲು ಅನಂತ ಪದ್ಮನಾಭ ಅಸ್ರಣ್ಣರು, ಡಾ. ಪದ್ಮಪ್ರಸಾದ ಅಜಿಲರು, ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಅಸ್ರಣ್ಣರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಕೇಳ ಅರಮನೆಯ ವಿಕ್ರಂ, ಕೇಳ ಮಾಗಣೆ ಗುತ್ತಿನ ನಾರಾಯಣ ಭಟ್, ಶಂಕರ ಭಟ್ ಬಾಲ್ಯ, ಸುನಂದ ಶೆಟ್ಟಿ ಬಂಡಸಾಲೆ, ಸದಾನಂದ ಪೂಜಾರಿ ದೋಲ್ದೊಟ್ಟು, ರಾಘು ನಾಯ್ಕ, ಮಮತಾ, ವಿನೋಧರ ಮರೋಡಿ, ಶಶಿಕಲಾ, ಮಾಜಿ ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ತಹಶೀಲ್ದಾರ್ ಪ್ರಥ್ವಿ ಸಾಕಂ, ಜಿಲ್ಲಾ ಯೋಜನ ರ್ದೇಶಕ ಜಯರಾಮ್, ಕಾರ್ಯರ್ವಹಣಾಧಿಕಾರಿ ಭವಾ ಶಂಕರ್, ಕಾಶಿಪಟ್ಣ ಗ್ರಾ.ಪಂ. ಉಪಾಧ್ಯಕ್ಷೆ ಶುಭವಿ, ಸದಸ್ಯರಾದ ಸುಶೀಲ, ರವೀಂದ್ರ, ಅಶೋಕ್ ಕುಮಾರ್, ಶಿಲ್ಪಾ, ಕಾರ್ಯಪಾಲಕ ಅಭಿಯಂತರ ಜಯಪ್ರಕಾಶ್, ತಾ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮತ್ತಿತರರು ಇದ್ದರು
ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಂಕರ ಭಟ್ ಬಾಲ್ಯ ವಂದಿಸಿದರು. ಶಿಕ್ಷಕ ದೇವುದಾಸ್ ನಾಯಕ್ ರೂಪಿಸಿದರು.






