ಬೆಳ್ತಂಗಡಿ: ಬಂಗಾಡಿ ಅರಮನೆಯ ಹಿರಿಯರಾದ ಶತಾಯುಷಿ ರವಿರಾಜ್ ಬಲ್ಲಾಳ್ (104ವ) ಅವರು ವಯೋಸಹಜ ಅಸೌಖ್ಯದಿಂದ ಜ.16ರಂದು ನಿಧನರಾಗಿದ್ದಾರೆ. ಬಂಗ ಅರಸರ ರಾಜಧಾನಿಯಾಗಿದ್ದ ಬಂಗಾಡಿಯ ಅರಮನೆಯನ್ನು ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಇಂದಿಗೂ ರವಿರಾಜ ಬಲ್ಲಾಳ್ ಅವರು ಬಂಗಾಡಿ ಅರಮನೆಯನ್ನು ಸಂರಕ್ಷಿಸಿಕೊಂಡು ಬಂದಿದ್ದರು.
ಬಂಗರಸರ ಮೂಲ ಹಾಗೂ ಪರಿಚಯ, ಅವರ ಆಳ್ವಿಕೆಯಲ್ಲಿ ನಿರ್ಮಿಸಿದ ಶ್ರವಣಗುಂಡ, ಶಾಂತಿನಾಥ ಸ್ವಾಮಿಯ ಬಸದಿ, ಜೈನ ಅರಸರ ಕಾಲದಲ್ಲಿ ಇದ್ದ ಪದ್ಧತಿ, ದಕ್ಷಿಣ ಕನ್ನಡ ಜಿಲ್ಲೆಯನ್ನಾಲಿದ ಜೈನ ಅರಸರು, ಹೆಗ್ಗಡೆ ಹಾಗೂ ಬಲ್ಲಾಳರ ಸರ್ವಧರ್ಮದ ಕೊಡುಗೆ ಬಂಗರಸರ ಕಾಲದ ಕೆಲವು ಶಾಸನಗಳು ಶಾಸನದಲ್ಲಿರುವ ನೂನ್ಯತೆಯ ವಿವರ ಬಂಗರಸರ ವಂಶಾವಳಿ ಲಕ್ಷ್ಮಪ್ಪರಸ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರವೂ ಲಕ್ಷ್ಮಪ್ಪ ಬಂಗರ ಸ್ವಾತಂತ್ರ್ಯಚಳುವಳಿಯ ಎಲ್ಲಾ ವಿವರಗಳನ್ನು ಬಿ.ರವಿರಾಜ್ ಬಲ್ಲಾಳರು ಸಂಶೋಧಿಸಿ ‘ ಬಂಗ ಅರಸರ ಇತಿಹಾಸ’ ಪುಸ್ತಕವನ್ನು ಬರೆದು ಅದರಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಹಲವಾರು ಲೇಖನಗಳನ್ನು ಬರಹಗಳನ್ನು ರವಿರಾಜ ಬಲ್ಲಾಳ್ ಅವರು ಬರೆದಿದ್ದಾರೆ. ಮೃತರು ಪುತ್ರರಾದ ಯಶೋಧರ ಬಲ್ಲಾಳ್, ಅಜಿತ್ ಬಲ್ಲಾಳ್ ಮತ್ತು ಪುತ್ರಿ ಜಯರತ್ನ ಅವರನ್ನು ಅಗಲಿದ್ದಾರೆ.





