ವೇಣೂರು: ಅಜಿಲ ಸೀಮೆಗೆ ಒಳಪಟ್ಟ ಪೆರಿಂಜೆ ಮಾಗಣೆಯ ಹೊಸಂಗಡಿ, ಕರಿಮಣೇಲು, ಬಡಕೋಡಿ, ಪಡ್ಯೋಡಿ ಹಾಗೂ ಮೂಡುಕೋಡಿ ಗ್ರಾಮಗಳಿಗೆ ಸಂಬಂಧಿತ ಶ್ರೀ ದೈವ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಪರ್ವ ಸೇವೆ ಹಾಗೂ ದೊಂಪದಬಲಿ ನೇಮೋತ್ಸವವು ಜ. 9 ಮತ್ತು 10ರಂದು ಜರಗಲಿದೆ.
ಜ. 9ರಂದು ಸಂಜೆ ವಾಸ್ತು ಪೂಜೆ ಹಾಗೂ ಇತರ ವೈದಿಕ ಪೂಜಾ ಕಾರ್ಯಗಳು ನಡೆಯಲಿದ್ದು, ಜ. 10ರಂದು ಬೆಳಿಗ್ಗೆ 8 ಗಂಟೆಗೆ ಧರ್ಮದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವಸೇವೆ ನಡೆಯಲಿದೆ. ಸಂಜೆ 4 ಗಂಟೆಯಿಂದ ದೊಂಪದಬಲಿ ಗಡುಸ್ಥಳಕ್ಕೆ ಗುತ್ತುಗಳಿಂದ ಪರಿವಾರ ದೈವಗಳ ಭಂಡಾರ ಆಗಮನವಾಗಲಿದೆ.
ಸಂಜೆ 6 ಗಂಟೆಯಿಂದ ನವಕ ಕಲಶಾಭಿಷೇಕ, ರಾತ್ರಿ 8 ಗಂಟೆಯಿಂದ ಶ್ರೀ ದೈವದ ಬಲಿನೇಮ, ರಾತ್ರಿ 9 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವದ ಬಲಿನೇಮ, ರಾತ್ರಿ 9-30ರಿಂದ ಶ್ರೀ ಕಲ್ಕುಡ-ಕಲ್ಲುರ್ಟಿ, ಕಾಳಮ್ಮ ದೈವಗಳ ಬಲಿ ನೇಮ ಜರಗಲಿದೆ. ಸಂಜೆ 7 ರಿಂದ ಗಂಟೆ 9ರ ತನಕ ಸಾರ್ವಜನಿಕ ಉಪಹಾರ, ರಾತ್ರಿ 9 ರಿಂದ 11 ಗಂಟೆಯ ತನಕ ಅನ್ನ ಸಂತರ್ಪಣೆ ನಡೆಯಲಿದೆ.
ಮಾರೂರು ಖಂಡಿಗದ ವೇ.ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಲಿದ್ದು, ರಾಜ್ಯಗುತ್ತು, ಮಾಗಣೆಗುತ್ತು, ಐದು ಗ್ರಾಮಗಳ ಗುತ್ತು, ಬರ್ಕೆಯವರು ಹಾಗೂ ಸಮಸ್ತ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜಿನರಾಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





