ಶ್ರೀರಾಮುಲು ಮೇಲೆ ಯಡಿಯೂರಪ್ಪಗೆ ಕೋಪ? ಕೊಟ್ಟು ಕಿತ್ತುಕೊಳ್ಳುವುದು ಬೇಕಿತ್ತಾ?

 

 

 

 

ಬೆಂಗಳೂರು: ಕಳೆದ 15 ದಿನಗಳ ಹಿಂದೆ ನ್ಯೂಸ್ 19 ಕನ್ನಡ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಅಥವಾ ಡಿಸಿಎಂ ನೀಡುತ್ತಾರೆ ಎಂಬ ವರದಿ ಮಾಡಿತ್ತು. ಇದರ ಬೆನ್ನಲೇ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ನಿನ್ನೆ ರಾತ್ರಿ ಆರೋಗ್ಯ ಇಲಾಖೆ ಖಾತೆ ಬದಲಾಯಿಸಿ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಆದರೆ ಶ್ರೀರಾಮುಲು ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಜೊತೆಯಲ್ಲೊ ಸಮಾಜ ಕಲ್ಯಾಣ ಇಲಾಖೆ ಇರುತ್ತದೆ ಎಂದು ಬಾವಿಸಿದ್ದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶ್ರೀರಾಮುಲು ಅವರ ಮೇಲೆ ಏಕೆ ಇಂತ ಸಿಟ್ಟು ಎಂಬುದು ತಿಳಿಯುತ್ತಿಲ್ಲ. ಎರಡು ಖಾತೆ ಹೊಂದಿದ್ದ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿ ಎರಡು ಖಾತೆಯನ್ನು ವಾಪಸ್ಸು ಪಡೆದಿದ್ದಾರೆ. ಎಲ್ಲಾರೂ ಸಹ ಎಲ್ಲಾ ಸರ್ಕಾರಗಳಲ್ಲಿ ಸಹ ಸಮಾಜ ಕಲ್ಯಾಣ ಜೊತೆಗೆ ಹಿಂದುಳಿದ ವರ್ಗಗಗಳ ಖಾತೆ ಇರುತ್ತದೆ. ಆದರೆ ಇದನ್ನು ವಾಪಸ್ಸು ಪಡೆದಿರುವುದು ರಾಮುಲು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ನಾಯಕ ಜನಾಂಗಕ್ಕೆ ನ್ಯಾಯ ಒದಗಿಸಿತು ಎನ್ನುವಷ್ಟರಲ್ಲಿ ಹಿಂದುಳಿದ ವರ್ಗಗಳ ಖಾತೆ ಕಿತ್ತುಕೊಂಡು ಯಡಿಯೂರಪ್ಪ ಅವರು ಏಕೆ ಹಿಂದುಳಿದ ವರ್ಗಗಳ ನಾಯಕನ ರಾಮುಲು ಮೇಲೆ ಸಿಟ್ಟು ಎಂಬ ಭಾವನೆ ಎಲ್ಲಾರಲ್ಲೂ ಮೂಡಿದೆ ಆದರೆ ರಾಮುಲು ಇದರ ಬಗ್ಗೆ ರಾಮುಲು ಯಾವ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.‌ ಒಂದು ಮಾತ್ರ ಸತ್ಯ ಆರೋಗ್ಯ ಇಲಾಖೆ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿ ಇಡೀ ರಾಜ್ಯದಲ್ಲಿ ಕೋವಿಡ್ ತಡೆಗಟ್ಟಲು ಪ್ರಾಣ ಲೆಕ್ಕಿಸದೆ ಹೋರಟ ನಡೆಸುವ ಜೊತೆಗೆ ತಾವು ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದು ಮಾದರಿಯಾಗಿದ್ದರು. ರಾಮುಲು ಅವರು ಆರೋಗ್ಯ ಖಾತೆ ನಿರ್ವಹಿಸಿದರು ಸಹ ಆರೋಗ್ಯ ಖಾತೆ ಬದಲಾವಣೆ ಮಾಡಿದರು.ಆದರೆ ನಾಯಕ ಜನಾಂಗದ ಒತ್ತಾಯ ಸಹ ಡಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಆಗಿತ್ತು. ಆದರೆ ಯಡಿಯೂರಪ್ಪ ಮಾತ್ರ ಕಣ್ಣೊರೆಸುವ ತಂತ್ರ ಅನುಸರಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours