ಅಳದಂಗಡಿ: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಎರಡನೇ ಮಹಿಳಾ ಕಬಡ್ಡಿ ವಿಶ್ವಕಪ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ಆಟಗಾರ್ತಿ, ಸುರತ್ಕಲ್ ಮೂಲದ ಧನಲಕ್ಷ್ಮೀ ಪೂಜಾರಿ ಅವರು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತದಾರರಾದ ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದು ಈಕೆಯನ್ನು ಗೌರವಿಸಿದರು.
ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ವಿಶ್ವನಾಥ ಬಂಗೇರ, ಧರ್ಣಪ್ಪ ಪೂಜಾರಿ ದೋರಿಂಜ, ಸುಂದರ ಪೂಜಾರಿ ನೀರಲ್ಕೆ, ಆನಂದ ಪೂಜಾರಿ ನೀರಲ್ಕೆ ಉಪಸ್ಥಿತರಿದ್ದರು.





