5 ಕೊಠಡಿ, ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಾಣ; ನ. 30ರಂದು ಭೂಮಿಪೂಜೆ
ವೇಣೂರು: ಬೋಧನ ಗುಣಮಟ್ಟ ಮತ್ತು ಮಕ್ಕಳ ದಾಖಲಾತಿ ಸಂಖ್ಯೆಯನ್ನು ಪರಿಗಣಿಸಿ ಅಮೇರಿಕಾ ಮೂಲದ ಒಸಾತ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) (One School at a Time Inc. (OSAAT) ಬೆಳ್ತಂಗಡಿ ತಾಲೂಕಿನ ವೇಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡ ನಿರ್ಮಾಣಕ್ಕೆ ರೂ. 1.25 ಕೋಟಿ ಅನುದಾನ ಒದಗಿಸಿದೆ.

ಅನುದಾನದಲ್ಲಿ ಮೂರು ದೊಡ್ಡ ಕೊಠಡಿಗಳು, ಎರಡು ಸಾಮಾನ್ಯ ಕೊಠಡಿಗಳು, ಬಾಲಕಿಯರ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಯ ನಿರ್ಮಾಣವಾಗಲಿದೆ.
ನ. 30ರಂದು ಭೂಮಿಪೂಜೆ
ಕೊಠಡಿ ನಿರ್ಮಾಣದ ಅಭಿವೃದ್ಧಿ ಕಾರ್ಯಗಳಿಗೆ ನ. 30ರಂದು ನಡೆಯುವ ಶಾಲಾ ಪ್ರತಿಭಾ ದಿನಾಚರಣೆ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಲಿದೆ.





