ಬೆಳ್ತಂಗಡಿ: ಅಳದಂಗಡಿಯಲ್ಲಿರುವ ಕಾರಣೀಕ ದೈವ ಕ್ಷೇತ್ರವಾದ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಸನ್ನಿಧಿಗೆ 80 ಕೆಜಿ ತೂಕದ ಘಂಟೆ ಸಮರ್ಪಣೆಯಾಗಲಿದೆ.
ಸತ್ಯದೇವತಾ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಹೊಂದಿರುವ ದೋರಿಂಜೆ ಅಮಣಿ ಮಂಜು ದೇವಾಡಿಗ ಮತ್ತು ಮಕ್ಕಳು ಈ ಘಂಟೆಯನ್ನು ಸಮರ್ಪಸಲಿದ್ದಾರೆ.
ಕಳೆದ 13 ವರ್ಷಗಳಿಂದ ಈ ಕುಟುಂಬ ತಾಯಿ ಸತ್ಯ ದೇವತೆಗೆ ನಿರಂತರವಾಗಿ ವರ್ಷದಲ್ಲಿ ಎರಡು ಸಲ ನೇಮೋತ್ಸವ ನಡೆಸುತ್ತ ಬರುತ್ತಿದೆ. ಮಂಜು ದೇವಾಡಿಗರವರು ಕೂಡ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುತ್ತಿದ್ದರು.






