filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (13, -1); aec_lux: 217.16873; hist255: 0.0; hist252~255: 0.0; hist0~15: 0.0;
ವೇಣೂರು: ಇಲ್ಲಿಯ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ವಾರ್ಷಿಕೋತ್ಸವ ಎಕ್ಸೆಲಿಯಾ-2025 ಕಾರ್ಯಕ್ರಮವು ನ. 22ರಂದು ಬೆಳಿಗ್ಗೆ 9-00 ಗಂಟೆಯಿಂದ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನ ವಿದ್ಯೋ ದಯ ಕ್ಯಾಂಪಸ್ ನಲ್ಲಿ ನಡೆಯುತ್ತಿದೆ.
ಬೆಳಿಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು, ಸಂಸ್ಥೆಯ ಚೇರ್ಮೆನ್ ಸುಮಂತ್ ಕುಮಾರ್ ಜೈನ್ ಬಿ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ. ಜಯರಾಮ್ ಶೆಟ್ಟಿ, ಕೆ. ಭಾಸ್ಕರ ಪೈ, ಶೀಲಾ ಎಸ್. ಹೆಗ್ಡೆ, ಪ್ರಕಾಶ್ ಎಸ್., ಡಾ. ಶಾಂತಿಪ್ರಸಾದ್, ಕೆ. ವಿಜಯ ಗೌಡ, ಅರುಣ್ ಕ್ರಾಸ್ತ, ಸುಧೀರ್ ಭಂಡಾರಿ, ಎಚ್. ಮಹಮ್ಮದ್ ಭಾಗವಹಿಸಿದ್ದರು.
ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್. ಮಾಧವ ಭಟ್ ನೆರವೇರಿಸಲಿದ್ದಾರೆ. ಕಂಪ್ಯೂಟರ್ ಲ್ಯಾಬ್ನ ಉದ್ಘಾಟನೆಯನ್ನು ಮುಂಬೈ ಸಾಪ್ಟ್ವೇರ್ ಲೈನ್ಸ್ ಇಂಡಿಯಾ ಪ್ರೈ. ಲಿ. ನಿರ್ದೇಶಕ ಅರುಣ್ ಹೆಗ್ಡೆ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ. ಶಿವರಾಮ್ ಹೆಗ್ಡೆ, ಮಲ್ಲಿಕಾ ಕೆ. ಹೆಗ್ಡೆ, ಸುಂದರ ಹೆಗ್ಡೆ ಬಿ.ಇ., ಪ್ರವೀಣ್ ಕುಮಾರ್ ಇಂದ್ರ, ಸುರೇಶ್ ಕುಮಾರ್ ಆರಿಗ, ರಾಜೇಶ್ ಪೂಜಾರಿ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಶಾಂತಿರಾಜ್ ಜೈನ್, ಮುಖ್ಯ ಶಿಕ್ಷಕಿ ಸುಜಾತ ಬಿ., ವಿದ್ಯಾರ್ಥಿ ಸಂಘದ ನಾಯಕಿ ದಿಶ್ಯಾ ಎಸ್. ಶೆಟ್ಟಿ ಭಾಗವಹಿಸಲಿದ್ದಾರೆ









