ವೇಣೂರು: ವೇಣೂರು ಯುವವಾಹಿನಿ ಘಟಕದ ವತಿಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವೇಣೂರುನಿಂದ ಹೊರಟ ಪಯಣವು ಬಜಗೋಳಿಯಲ್ಲಿ ಬೆಳ್ಳಿಗೆಯ ಉಪಹಾರ ಮುಗಿಸಿ ಬಸ್ಸಿನಲ್ಲಿ ವಿವಿಧ ರೀತಿಯ ಮನರಂಜನೆ ಕಾರ್ಯಕ್ರಮಗಳೊಂದಿಗೆ ಸೈಂಟ್ ಮೇರಿ ದ್ವೀಪಕ್ಕೆ ಬೋಟ್ ನಲ್ಲಿ ಭೇಟಿ ನೀಡಿ ಸಂಭ್ರಮಿಸಿ, ಮಧ್ಯಾಹ್ನದ ಊಟ ಮಲ್ಪೆ ಬೀಚ್ ಹೋಟೆಲ್ ನಲ್ಲಿ ಮಾಡಲಾಯಿತು.
ಅಲ್ಲಿಂದ ಮತ್ತೆ ಮಲ್ಪೆ ಬೀಚ್ ಹೋಗಿ ಸಂಭ್ರಮಿಸಿ ಅಲ್ಲಿಂದ ಸಂಜೆ ಹೊತ್ತಿಗೆ ವಾಪಸ್ ಬರುವಾಗ ಕಾರ್ಕಳದ ಹೋಟೆಲಿನಲ್ಲಿ ಸವಿರುಚಿಯಾದ ಊಟದ ವ್ಯವಸ್ಥೆಯೊಂದಿಗೆ ರಾತ್ರಿ ಹೊತ್ತಿಗೆ ಕಾರ್ಕಳ ಅತ್ತೂರು ಚರ್ಚ್ ಶ್ರೀ ಮಾತೆಯಾ ವಾರ್ಷಿಕ ಉತ್ಸವದಲ್ಲಿ ಎಲ್ಲರೂ ಬಾಗವಹಿಸುವುದರೊಂದಿಗೆ ವೇಣೂರು ಯುವವಾಹಿನಿ ಪ್ರವಾಸ ೨೦೨೬ ಸಂಪನಗೊಂಡಿತ್ತು.
ಈ ಒಂದು ಪಯಣದಲ್ಲಿ ಸ್ನೇಹಿತರು, ಘಟಕದ ಸದಸ್ಯರು, ಅವರ ಮನೆಯವರು ಭಾಗವಹಿಸಿ ಪ್ರವಾಸವನ್ನು ಯಶಸ್ವಿಗೊಳಿಸಿದರು.
ಸೈಂಟ್ ಮೇರೀಸ್ ದ್ವೀಪ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್ಲ್ಯಾಂಡ್ ಎಂದು ಇನ್ನೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯದ ಕೇವಲ 4 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವೂ ಒಂದು ಹಾಗು ದೇಶದ 26 ಭೂವೈಜ್ಞಾಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.






