ಜೈಪುರ, ಡಿಸೆಂಬರ್ 28: ಮಹಿಳೆಯ ದೇಹದ ಮೇಲೆ ಹತ್ತಾರು ಗಾಯಗಳು, ಒಳ ಉಡುಪುಗಳು ಕೂಡ ನಾಪತ್ತೆಯಾಗಿದ್ದವು, ಐಟಿ ಸಂಸ್ಥೆಯ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ತೀರಾ ಭಯಾನಕವಾಗಿತ್ತು. ರಾಜಸ್ಥಾನದ ಉದಯಪುರದಲ್ಲಿ ಕಾರಿನಲ್ಲಿ ಈ ಘಟನೆ ನಡೆದಿತ್ತು. ಘಟನೆ ಡಿಸೆಂಬರ್ 20 ರಂದು ನಡೆದಿತ್ತು. ಜಿಕೆಎಂ ಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿತೇಶ್ ಪ್ರಕಾಶ್ ಸಿಸೋಡಿಯಾ ಹಾಗೂ ಇನ್ನಿಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಜಿತೇಶ್, ಗೌರವ್ ಸರದಿಯಂತೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಅತ್ಯಾಚಾರವನ್ನು ದೃಢಪಡಿಸಿದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ, ಮಹಿಳೆಗೆ ಗಾಯಗಳಾಗಿದ್ದು, ಆಕೆಯ ಖಾಸಗಿ ಭಾಗಗಳು ಮತ್ತು ದೇಹದ ಇತರ ಭಾಗಗಳಲ್ಲಿ ತೀರಾ ನೋವಾಗಿದೆ ಎಂದು ತಿಳಿದುಬಂದಿದೆ.
ತನ್ನ ಕೆಲವು ಆಭರಣಗಳು, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿವೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.






