ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಗೆ ತಂತ್ರ ಹೆಣೆದ ಯಾರು ಗೊತ್ತೆ!

 

ಮೊಳಕಾಲ್ಮುರು: ಮೊಳಕಾಲ್ಮುರು ಕ್ಷೇತ್ರಕ್ಕೆ  ಅಭ್ಯರ್ಥಿ ಕೊರೆತೆಯಿಂದ ಬಿಜೆಪಿ  ನುಲುಗಿತ್ತು. ಶ್ರೀರಾಮುಲು  ಅವರ ಕ್ಷೇತ್ರ ಯಾತ್ರೆ ಮುಂದುವರೆದಿದ್ದು ಈ ಬಾರಿ ಸಹ ಮೊಳಕಾಲ್ಮುರು ಬಿಟ್ಟು ಸಂಡೂರು,ಕೂಡ್ಲಿಗಿ ಕಡೆ ಹೆಜ್ಜೆ ಹಾಕಿದ್ದಾರೆ. ಆದರೆ ಮೊಳಕಾಲ್ಮುರು ಅಭ್ಯರ್ಥಿ ವಿಚಾರದಲ್ಲಿ ಮಾಜಿ ಶಾಸಕ ಶ್ರೀರಾಮುಲು ಕಡು ವಿರೋಧಿ ಎಂದೇ ಗುರುತಿಸಲ್ಪಟ್ಟಿದ್ದ ತಿಪ್ಪೇಸ್ವಾಮಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡುವಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಯಶಸ್ವಿಯಾಗಿದ್ದಾರೆ.

ಕಳೆದ ಎರಡ್ಮೂರು ತಿಂಗಳಿಂದ ಮಾಜಿ ಶಾಸಕ ತಿಪ್ಪೇಸ್ವಾಮಿ ಮನವೊಲಿಸುವಲ್ಲಿ ತಿಪ್ಪಾರೆಡ್ಡಿ ಪಾತ್ರ ದೊಡ್ಡದಿದೆ. ಜಿಲ್ಲೆಯಲ್ಲಿ ಚಾಣಾಕ್ಷ ರಾಜಕಾರಣಿ ಎಂದೇ ಖ್ಯಾತಿ ಹೊಂದಿರುವ ತಿಪ್ಪಾರೆಡ್ಡಿ ಅವರಿಗೆ ಬಿಜೆಪಿ ವರಿಷ್ಠರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಬಿಜೆಪಿ ಕರೆ ತರಲು ಸೂಚನೆ ನೀಡಿದ್ದರು. ಇದರ ಅನುಗುಣವಾಗಿ ಅನೇಕ ಸಭೆಗಳನ್ನು ನಡೆಸಿದ ತಿಪ್ಪಾರೆಡ್ಡಿ  ರಣತಂತ್ರ ಎಣೆದು ತಿಪ್ಪೇಸ್ವಾಮಿ ಗೆ ಬಿಜೆಪಿಗೆ ಬಂದರೆ ಸ್ಥಾನಮಾನ ಕುರಿತು ಮಾತನಾಡಿ ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ನಡುವಿನ ಭಿನ್ನಪ್ರಾಯ ಸಾಧ್ಯವಾದಷ್ಟು ಶಮನ ಮಾಡಿದರು. ಮೊಳಕಾಲ್ಮುರು ಕ್ಷೇತ್ರದಲ್ಲಿ ತನ್ನದೇ ಆದ ಪಡೆ ಹೊಂದಿರುವ ತಿಪ್ಪಾರೆಡ್ಡಿ ಅವರು ಎಲ್ಲಾರನ್ನು  ಜೊತೆ ಸೇರಿ ಮಾತನಾಡಿ ಇಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಯಲ್ಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ರಾಜಕೀಯ ಪಡಾಸಾಲೆಯಲ್ಲಿ ಕೇಳಿ ಬರುತ್ತಿದ್ದು  ಮುಂದಿನ ದಿನದಲ್ಲಿ ಬಿಜೆಪಿಗೆ ಯಾವ ರೀತಿ ಪ್ಲಸ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
[t4b-ticker]

You May Also Like

More From Author

+ There are no comments

Add yours