ಕುಣಿಗಲ್: ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಶಾಸಕ ಡಾ.ಜಿ.ಪರಮೇಶ್ವರ ಅವರ ಕಾಲಿಗೆ ನಮಸ್ಕರಿಸಿ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಆಶೀರ್ವಾದ ಪಡೆದುಕೊಂಡರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪರಮೇಶ್ವರ ಅವರು ಎಡೆಯೂರು ದೇಗುಲದಲ್ಲಿ ಪೂಜೆ ಸಲ್ಲಿಸಲು ಬಂದಿದ್ದರು. ಅದೇ ಸಮಯಕ್ಕೆ ವಿಜಯೇಂದ್ರ ಸಹ ಬಂದರು. ಇಬ್ಬರೂ ಒಟ್ಟಾಗಿ ಪೂಜೆ ಸಲ್ಲಿಸಿದರು.
ನಂತರ ವಿಜಯೇಂದ್ರ ಅವರಿಗೆ ಪರಮೇಶ್ವರ ಶಾಲು ಹೊದಿಸಿ ಶುಭ ಕೋರಿದರು. ಆಗ ವಿಜಯೇಂದ್ರ ಅವರು ಪರಮೇಶ್ವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಒಳ್ಳೆಯದಾಗಲಿ ಎಂದು ಹಾರೈಸಿದರು.
[t4b-ticker]
+ There are no comments
Add yours