ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ. 16 ಧನು ಸಂಕ್ರಮಣದಿಂದ ಜ. 14ರ ಮಕರ ಸಂಕ್ರಮಣದವರೆಗೆ ಬೆಳಿಗ್ಗೆ 5-15ರಿಂದ ಧನುರ್ಮಾಸ ಪೂಜೆ ನಡೆಯಲಿದೆ.
ಭಕ್ತಾಧಿಗಳು ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಹೂ, ತುಳಸಿ, ಹಿಂಗಾರ, ಸಿಯಾಳ, ಅರ್ಪಿಸಬಹುದಾಗಿದೆ. ಧನುರ್ಮಾಸ ಪೂಜೆಯ ಬೆಳಿಗ್ಗೆ ಉಪಹಾರ ಸೇವೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡುವಂಂತೆ ವ್ಯವಸ್ಥಾಪನ ಸಮಿತಿ ಪ್ರಕಟಣೆ ತಿಳಿಸಿದೆ.






