ವೇಣೂರು: ವೇಣೂರು ಮಹಾವೀರ ನಗರದ ಸನಿಹದ ರಸ್ತೆ ಬದಿ ತೆರೆದುಕೊಂಡಿದ್ದ ಕೊಳವೆಬಾವಿಯನ್ನು ಸ್ಥಳೀಯಾಡಳಿತ ಮುಚ್ಚಿದೆ.
ತೆರೆದ ಕೊಳವೆಬಾವಿಯ ಅಪಾಯದ ಬಗ್ಗೆ ಇಂದು ನ್ಯೂಸ್ 19 ಕನ್ನಡ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಲರ್ಟ್ ಆದ ಸ್ಥಳೀಯ ಜನಪ್ರತಿನಿಧಿಗಳು ಬಾಯ್ತೆರೆದುಕೊಂಡಿದ್ದ ಕೊಳವೆಬಾವಿಗೆ ಮುಕ್ತಿ ನೀಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತ್ವರಿತ ಸ್ಪಂದನೆಗೆ ಪ್ರಶಂಸೆ ವ್ಯಕ್ತವಾಗಿದೆ.





