ವೇಣೂರು: ಯುವ ಸೇವಾ ಸಂಗಮ ಟ್ರಸ್ಟ್ (ರಿ.) ವೇಣೂರು ಇವರ ಸಾರಥ್ಯದಲ್ಲಿ ವಿವಿಧ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಉಚಿತ ಬೃಹತ್ ಆರೋಗ್ಯ, ದಂತ ಚಿಕಿತ್ಸೆ, ಆರ್ಯುವೇದ ಚಿಕತ್ಸೆ ಹಾಗೂ ರಕ್ತದಾನ ಶಿಬಿರವು ಡಿ. 21ರಂದು ಬೆಳಿಗ್ಗೆ 8-30ರಿಂದ ಮಧ್ಯಾಹ್ನ 1-00 ಗಂಟೆಯ ತನಕ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ನಲ್ಲಿ ನಡೆಯಲಿದೆ.
ಎಂಆರ್ಪಿಎಲ್ ಕೊಡುಗೆಯಾಗಿ ನೀಡಿದ ಸಾರ್ವಜನಿಕ ಅಂಬ್ಯುಲೆನ್ಸ್ನ ಲೋಕಾರ್ಪಣೆ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಲಿದೆ.





