ವೇಣೂರು: ಶ್ರೀ ಬಾಹುಬಲಿ ಯುವಜನ ಸಂಘ ವೇಣೂರು ಇವರ ಆಶ್ರಯದಲ್ಲಿ ಅವಿಭಜಿತ ದ.ಕ. ಜಿಲ್ಲಾಮಟ್ಟದ ಜೈನ ಬಾಂಧವರ ಕ್ರೀಡೋತ್ಸವವು ಡಿ. 25ರಂದು ವೇಣೂರಿನ ಶ್ರೀ ಬಾಹುಬಲಿ ಬೆಟ್ಟದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9-30ಕ್ಕೆ ಕ್ರೀಡೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 7-30ಕ್ಕೆ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಮತ್ತು ಹಗ್ಗಜಗ್ಗಾಟ ಪಂದ್ಯಗಳ ಉದ್ಘಾಟನೆ ನಡೆಯಲಿದೆ. ಅವಿಭಜಿತ ಜಿಲ್ಲೆಯ ಜೈನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ.






