ಸಂಘ-ಸಂಸ್ಥೆಗಳ ಕಾರ್ಯ ಶ್ಲಾಘನೀಯ: ಸುಮಂತ್ ಕುಮಾರ್ ಜೈನ್
ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಸಾರಥ್ಯ, 155 ಯುನಿಟ್ ರಕ್ತ ಸಂಗ್ರಹ, 1000ಕ್ಕೂ ಮಿಕ್ಕಿ ಶಿಬಿರದ ಪ್ರಯೋಜನ ಪಡೆದ ಜನ
ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಇವರ ಸಾರಥ್ಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಬ್ಲಡ್ ಸೆಂಟರ್ ಕೆಎಂಸಿ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ, ದಂತ ಚಿಕಿತ್ಸೆ, ಆರ್ಯುವೇದ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರವು ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ನ ವಿದ್ಯೋದಯ ಕ್ಯಾಂಪಸ್ನಲ್ಲಿ ನಡೆಯಿತು.
ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶಿಬಿರದ ಉದ್ಘಾಟನೆ ನೆರವೇರಿಸಿ, ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರುಗಳ ಮೂಲಕ ಆರೋಗ್ಯ ಸೇವೆ ನೀಡುವಂತೆ ಮಾಡಿದ ಸಂಘಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ತಜ್ಞ ವೈದ್ಯರುಗಳಾದ ಡಾ. ದೀಪಕ್ ಮಡಿ, ಡಾ. ಆತ್ಮಾನಂದ ಹೆಗ್ಡೆ, ಮೆಡಿಕಲ್ ಆಫಿಸರ್ ಡಾ. ಸಿಂಚನಾ, ವೇಣೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಅನಘ, ಡಾ. ಶ್ರೀನಿವಾಸ ಪೈ, ಡಾ. ಈಶ್ವರ್ ಕೀರ್ತಿ, ಡಾ. ರಮ್ಯಾ ಶೆಣೈ, ಡಾ. ಭೂಷಣ್ ಶೆಟ್ಟಿ, ಡಾ. ಶಂಕರಣ್ ನಂಬೂಧಿರಿ, ಡಾ. ಮೇಘನಾ ಮಡಿ, ಡಾ. ಜೋ ಕಿಸ್ಟೋಫರ್, ಡಾ. ರಮಿತ್ ಶೆಟ್ಟಿ, ವೇಣೂರು ಗ್ರಾ.ಪಂ.ನ ಪಿಡಿಒ ಪ್ರಕಾಶ್ ಎಚ್., ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ವೇಣೂರು ಫಲ್ಗುಣಿ ಸೇವಾ ಸಂಘದ ಜಯರಾಜ್ ಎಸ್., ಗುಂಡೂರಿ ಹಾಲು ಉ.ಸ. ಸಂಘದ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿಮಜಲು, ಸಂಭಾಷಿಣಿ ಉದಯ ಕುಮಾರ್, ಸುಧೀರ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಕೆ. ವಿಜಯ ಗೌಡ ಸ್ವಾಗತಿಸಿ, ಜಗನ್ನಾಥ ದೇವಾಡಿಗ ನಿರೂಪಿಸಿದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ಎನ್. ವಂದಿಸಿದರು.
ಸನ್ಮಾನ
ವೇಣೂರಿನ ಪ್ರಖ್ಯಾತ ವೈದ್ಯ, ಶಿಬಿರದ ಆಯೋಜನೆಗೆ ಸಹಕರಿಸಿದ ಡಾ. ಶಾಂತಿಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ. ವೇಣೂರು, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು, ಪ್ರಾ.ಕೃ.ಪ.ಸ. ಸಂಘ, ಯುವಕ ಮಂಡಲ, ಮಹಿಳಾ ಮಂಡಲ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾ. ಒಕ್ಕಲಿಗರ ಸೇವಾ ಟ್ರಸ್ಟ್, ಫಲ್ಗುಣಿ ಸೇವಾ ಸಂಘ, ಕಾಟಿ ಅಭಿಮಾನಿ ಬಳಗ, ಸೇವಾ ಶರಧಿ ವಿಶ್ವಸ್ತ ಮಂಡಳಿ, ಶ್ರೀರಾಮ ಭಜನ ಮಂಡಳಿ ನಡ್ತಿಕಲ್ಲು, ವರ್ತಕರ ಸಂಘ, ಲಯನ್ಸ್ ಕ್ಲಬ್, ಗುಂಡೂರಿ ಹಾಲು ಉತ್ಪಾದಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು.
155 ಯುನಿಟ್ ರಕ್ತ ಸಂಗ್ರಹವಾಗಿದ್ದು, ಸುಮಾರು ಒಂದು ಸಾವಿರದಷ್ಟು ಮಂದಿ ಒಟ್ಟು ಶಿಬಿರದ ಪ್ರಯೋಜನ ಪಡೆದುಕೊಂಡರು.





