ವೇಣೂರು: ಗ್ರಾಮ ಪಂಚಾಯತು ಅರಿವು ಕೇಂದ್ರ ವೇಣೂರು ಇದರ ವಿಶೇಷ ಚೇತನರ ಸ್ನೇಹಿ ಅಭಿಯಾನ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಹಾಗೂ ಮಕ್ಕಳ ಗ್ರಾಮ ಸಭೆಯನ್ನು ಡಿ. 20ರಂದು ವೇಣೂರು ಗ್ರಾಮ ಪಂಚಾಯತ್ ಬಸು ತಂಗುದಾಣ ಕಟ್ಟಡದ ಸಭಾಭವನದಲ್ಲಿ ನಡೆಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್. ಅವರು ವಿಶೇಷ ಚೇತನರ ಬಗ್ಗೆ ಯಾವ ರೀತಿ ಕಾಳಜಿ ವಹಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಮಾಹಿತಿ ನೀಡಿದರು. ಮಾನವ ಹಕ್ಕುಗಳ ಬಗ್ಗೆ ಸರಕಾರಿ ಪ್ರೌಢ ಶಾಲೆ ವೇಣೂರು ಇಲ್ಲಿಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಸಂಧ್ಯಾ ಜೈನ್ ಮಾಹಿತಿ ನೀಡಿದರು. ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಏಳು ಶಾಲೆಗಳಿಂದ 110 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಹೆಗ್ಡೆಯವರು ಮತ್ತು ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು.






