ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ವೇಣೂರು ಶಾಖೆಯಲ್ಲಿರುವ ಗುರುದೇವ ನವೋದಯ ಸ್ವಸಹಾಯ ಸಂಘದ ಸದಸ್ಯರಾದ ಲೀಲಾ, ಧನುಶ್ರೀ ನವೋದಯ ಸ್ವಸಹಾಯ ಸಂಘದ ಸದಸ್ಯೆ ಅಖಿಲಾ, ವಿನಾಯಕ ನವೋದಯ ಸ್ವಸಹಾಯ ಸಂಘದ ಸದಸ್ಯೆ ರಕ್ಷಾ, ಸಮೃದ್ದಿ ನವೋದಯ ಸಂಘದ ಸದಸ್ಯೆ ರೇಖಾ ರವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರಿನಿಂದ ಮಂಜೂರಾದ ಚೈತನ್ಯ ವಿಮಾ ಒಟ್ಟು ಮೊತ್ತ ರೂ.27000/ ಚೆಕ್ ನ್ನು ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್. ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೇರಕಿಯಾದ ಶ್ರೀಮತಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ಭಗವಾನ್, ಶ್ರೀಮತಿ ನೀತಾ, ಅಜಿತ್, ಶ್ರೀಮತಿ ಭಾರತಿ ಉಪಸ್ಥಿತರಿದ್ದರು.





