ಜೂ.24 ರಂದು ತ್ರಿವಿಕ್ರಮ ಚಿತ್ರ ರಾಜ್ಯಾದ್ಯಂತ ಬಿಡುಗಡೆ

 

 

ಚಿತ್ರದುರ್ಗ: ಕ್ರೇಜಿಸ್ಟಾರ್ ರವಿಚಂದ್ರನ್‌ರವರ ಪುತ್ರ ವಿಕ್ರಮ್ ರವಿಚಂದ್ರನ್‌ರವರ ಚೊಚ್ಚಲ ಚಿತ್ರ ತ್ರಿವಿಕ್ರಮ ಜೂ.೨೪ ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸಹನಮೂರ್ತಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಚಿತ್ರದಲ್ಲಿ ನಟಿ ಆಕಾಂಕ್ಷ ಶರ್ಮ ವಿಕ್ರಮ್ ರವಿಚಂದ್ರನ್ ಜೊತೆ ನಟಿಸಿದ್ದು, ಚಿತ್ರದಲ್ಲಿ ದೊಡ್ಡ ತಾರಾಬಳಗವನ್ನು ಒಳಗೊಂಡಿದ್ದು ಮಧ್ಯಮ ವರ್ಗದವರ ಲವ್ ಸ್ಟೋರಿ ಆಧಾರಿತ ಚಿತ್ರ ಇದಾಗಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಯುವ ನಟ-ನಟಿಯರನ್ನು ಬೆಳೆಸಿ ಹಾರೈಸುವಂತೆ ಮನವಿ ಮಾಡಿದರು.
ನಟ ವಿಕ್ರಮ್ ರವಿಚಂದ್ರನ್ ಮಾತನಾಡಿ ಮಧ್ಯಮ ವರ್ಗದವರು ಆಸೆಯಲ್ಲಿಯೇ ಹುಟ್ಟಿ, ಆಸೆಯಲ್ಲಿಯೇ ಬದುಕು, ಆಸೆಯಲ್ಲಿಯೇ ಸಾಯುತ್ತಾರೆ, ಮಧ್ಯಮ ವರ್ಗದ ಹುಡುಗ ಹಾಗೂ ಶ್ರೀಮಂತ ಮನೆತನದ ಹುಡುಗಿಯ ನಡುವೆ ನಡೆಯುವ ಅವರ ಕನಸು ಮತ್ತು ಪ್ರೇಮವನ್ನು ಆಧರಿಸಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಜಸ್ಥಾನ್, ಕಾಶ್ಮೀರ, ಬ್ಯಾಂಕಾಕ್‌ನಲ್ಲಿ ನಡೆದಿದೆ. ಕಾಮನ್ ಮ್ಯಾನ್ ಪಾತ್ರ ಮಾಡಬೇಕೆಂಬ ಆಸೆಯನ್ನಿಟ್ಟುಕೊಂಡು ಚಿತ್ರದಲ್ಲಿ ನಟಿಸಿದ್ದೇನೆ. ಎಲ್ಲರೂ ಪ್ರೋತ್ಸಾಹಿಸಿ ಬೆಳೆಸಿ ಎಂದು ವಿನಂತಿಸಿದರು.
ಈ ಚಿತ್ರದಲ್ಲಿ ಆರು ಹಾಡುಗಳು, ನಾಲ್ಕು ಫೈಟಿಂಗ್‌ವುಳ್ಳ ಚಿತ್ರ ರಾಜ್ಯಾದ್ಯಂತ ೨೫೦ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಪ್ರೇಕ್ಷಕರು, ಅಭಿಮಾನಿಗಳ ಶ್ರೀರಕ್ಷೆ ಮೇಲೆ ನಮ್ಮ ಚಿತ್ರದ ಯಶಸ್ಸು ನಿಂತಿದೆ ಎಂದು ಹೇಳಿದರು.
ನಟಿ ಆಕಾಂಕ್ಷ ಶರ್ಮ ಮಾತನಾಡಿ ಇದು ನನ್ನ ಚೊಚ್ಚಲ ಸಿನಿಮಾ ಎಲ್ಲರೂ ವೀಕ್ಷಿಸಿ ಹಾರೈಸಿ ಎಂದು ಕೋರಿದರು.

 

 

You May Also Like

More From Author

+ There are no comments

Add yours