ಬ್ರೇಕ್ ಫೇಲ್ ಆದ ಲಾರಿ ಡಿಕ್ಕಿ ಒಡೆದಿದ್ದು  ಎಷ್ಟು ಲಾರಿ ಬೈಕ್ ಗಳಿಗೆ!

ಬ್ರೇಕ್ ಫೇಲ್ ಆದ ಲಾರಿ ಡಿಕ್ಕಿ ಒಡೆದಿದ್ದು ಎಷ್ಟು ಲಾರಿ ಬೈಕ್ ಗಳಿಗೆ!

Listen to this article

ಬೆಂಗಳೂರು: ರಾಜಧಾನಿಯ ಯಲಹಂಕ ಬಳಿ ಲಾರಿಯ ಬ್ರೇಕ್‌ ಫೈಲ್ಯೂರ್‌ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.

 

 

ಮರದ ದಿಮ್ಮಿಗಳ ಸಾಗಾಟ ಮಾಡುತ್ತಿದ್ದ ಲಾರಿಯ ಬ್ರೇಕ್‌ ಫೈಲ್ಯೂರ್‌ ಆದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ಐದಾರು ಕಾರು ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸಲು ಚಾಲಕ ಸಫಲನಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಮರ ಧರೆಗುರುಳಿದೆ.

ಯಲಹಂಕದ ಗ್ಯಾಲರಿಯ ಮಾಲ್ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆಯುವ ಮುನ್ನ ಲಾರಿ ಸುಮಾರು ಐದು ಕಾರುಗಳನ್ನು ಜಖಂಗೊಳಿಸಿದೆ. ಬೆಂಗಳೂರು ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Trending Now

Leave a Reply

Your email address will not be published. Required fields are marked *

Trending Now