ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಇನ್ ಫ್ಲುಯೆನ್ಸರ್ ರೇಷ್ಮಾ ಅಲಿಯಾಸ್ ಚಿನ್ನು ಪಾಪು ಅವರ ನಿಗೂಢ ಸಾವು ಇದೀಗ ಕಾಸರಗೋಡು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರಂಭದಲ್ಲಿ ಇದೊಂದು ಕೌಟುಂಬಿಕ ಮನಸ್ತಾಪದಿಂದ ನಡೆದ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ, ಸಾವಿನ ಸುತ್ತ ಹಬ್ಬಿರುವ ಅನುಮಾನಗಳ ಬೆನ್ನತ್ತಿರುವ ಪೊಲೀಸರು ತನಿಖೆಯನ್ನು ಹಂತ ಹಂತವಾಗಿ ತೀವ್ರಗೊಳಿಸುತ್ತಿದ್ದಾರೆ. ವಿಶೇಷವೆಂದರೆ, ಈ ಸಾವಿನ ಹಿಂದೆ ಮಾದಕ ದ್ರವ್ಯ ಜಾಲದ ನಂಟಿರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿಸಿವೆ.






