




ವೇಣೂರು: ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಶ್ರೀಧಾಮ ನಿಲಯ ಮನೆ ವಠಾರದಲ್ಲಿ ಎ. 4ರಂದು ಸಂಜೆ 5-30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಶ್ರೀಧಾಮ ನಿಲಯದ ಶ್ರೀಮತಿ ಸತ್ಯ ಮತ್ತು ದಾಮೋದರ ಕುಂದರ್ ದಂಪತಿ ಹಾಗೂ ಮಕ್ಕಳಿಂದ ಈ ಸೇವೆಯಾಟ ನಡೆಯಲಿದೆ.