ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ನೇಮಕ

 

 

 

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಬೆನ್ನಲ್ಲೇ 15ನೇ ಕರ್ನಾಟಕ ವಿಧಾನಸಭೆಯನ್ನು ರಾಜ್ಯಪಾಲರು ವಿಸರ್ಜಿಸಿದ್ದಾರೆ. ಅಲ್ಲದೇ ನೂತನ ಶಾಸಕರಿಗೆ ಪ್ರಮಾಣವಚನ ಸ್ವೀಕರಿಸಲು ಮೇ.22ರ ಬೆಳಿಗ್ಗೆ 11ಕ್ಕೆ ವಿಧಾನಮಂಡಲದ ಅಧಿವೇಶನವನ್ನು ಕರೆಯಲಾಗಿದೆ.

ಈ ಸಂಬಂಧ ರಾಜ್ಯಪಾಲರ ಪರವಾಗಿ ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ.ಶ್ರೀಧರ್ ವಿಶೇಷ ರಾಜ್ಯಪತ್ರಿಕೆಯಲ್ಲಿ ಆದೇಶ ಹೊರಡಿಸಿದ್ದಾರೆ.

ಭಾರತ ಸಂವಿಧಾನದ 174ನೇ ಅನುಚ್ಛೇಧದ (2)ನೇ ಖಂಡದ (ಬಿ) ಉಪಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆದ ನಾನು 15ನೇ ಕರ್ನಾಟಕ ವಿಧಾನಸಭೆಯನ್ನು ವಿಸರ್ಜಿಸಲು ಆದೇಶಿಸುತ್ತೇನೆ ಎಂದಿದ್ದಾರೆ.

ಮೇ.22, 2023ರ ಸೋಮವಾರದಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಸಭೆಯನ್ನು ಸಮಾವೇಶವನ್ನು ಕರೆದಿದ್ದಾರೆ. ವಿಧಾನಸಭೆಯ ಸದಸ್ಯನು ಆತನ ಸ್ಥಾನವನ್ನು ವಹಿಸಿಕೊಳ್ಳುವ ಮುಂಚೆ ಪ್ರತಿಜ್ಞಾ ಅಥವಾ ಪ್ರಮಾಣ ವಚನವನ್ನು ಮಾಡಲು ವಿಧಾನಸಭೆಯ ಸದಸ್ಯ ಆರ್ ವಿ ದೇಶಪಾಂಡೆ ಅವರನ್ನು ಈ ಮೂಲಕ ನೇಮಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸದನವು ಸಭಾಧ್ಯಕ್ಷರನ್ನು ಯುಕ್ತವಾಗಿ ಚುನಾಯಿಸುವವರೆಗೆ ವಿಧಾನಸಭೆಯ ಸಭಾಧ್ಯಕ್ಷರ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ದಿನಾಂಕ 22-05-2023ರಿಂದ ಜಾರಿಗೆ ಬರುವಂತೆ ವಿಧಾನಸಭೆಯ ಸದಸ್ಯ ಆರ್ ವಿ ದೇಶಪಾಂಡೆ ಇವರನ್ನು ನೇಮಿಸುತ್ತಿದ್ದೇನೆ ಎಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours