ಮಾಣಿಲ ಶ್ರೀಗಳ ದಿವ್ಯಉಪಸ್ಥಿತಿ, ಗುರಿಕಾರರು-ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಭಾಗಿ
ಕೈಕಂಬ: ಅನಾಧಿ ಕಾಲದಿಂದ ಆರಾದಿಸಿಕೊಂಡು ಬಂದಿರುವ ಮುತ್ತೂರು ಬೆಜ್ಜೆ ಬಂಜನ್ ಕುಟುಂಬದ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಮೊಗ ಸಮರ್ಪಣೆ ಹಾಗೂ ವೈಭವದ ನೇಮೋತ್ಸವ ಮತ್ತು ಕೋಲೋತ್ಸವಕ್ಕೆ ಮಾಣಿಲ ಶ್ರೀಧಾಮದ ಯೋಗಿಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಫೆ. ೭ರಂದು ಚಾಲನೆ ದೊರೆಯಿತು.
ಬೆಳಿಗ್ಗೆ ಶ್ರೀ ನಾಗ ಮತ್ತು ನಾಗಬ್ರಹ್ಮ ದೇವರಿಗೆ ತಂಬಿಲಸೇವೆ, ಗಣಪತಿ ಹೋಮ, ದೈವಗಳಿಗೆ ನವಕ ಕಲಶದ ಬಳಿಕ ದೈವಗಳ ಪುನರ್ ಪ್ರತಿಷ್ಠೆ ನಡೆಯಿತು. ಕಾರ್ಯಾಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಮುಡಿಪು ಶುದ್ಧ ನಡೆದು ಕುಪ್ಪೆಟ್ಟು ಪಂಜುರ್ಲಿ ದರ್ಶನದೊಂದಿಗೆ ಮೊಗ ಸಮರ್ಪಣೆ ನೆರವೇರಿತು.
ನೇಮೋತ್ಸವ
ಫೆ. ೭ರ ಸಂಜೆ ೭ ಗಂಟೆಯಿಂದ ಮಹಿಷಂದಾಯ, ಜುಮಾದಿ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ. ನೆರೆದಿರುವ ಭಕ್ತಾಧಿಗಳಿಗೆ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.
ಕೋಲೋತ್ಸವ
ಫೆ. ೮ರಂದು ಶ್ರೀ ಸತ್ಯದೇವತೆ (ಪೊಸಪ್ಪೆ), ಹಿರಿಯಜ್ಜ, ಕುಪ್ಪೆಟ್ಟು ಮಂತ್ರದೇವತೆ, ಕಲ್ಲುರ್ಟಿ, ಕುಪ್ಪೆಟ್ಟು ಪಂಜುರ್ಲಿ, ಸ್ಥಳದ ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ಕೊರತಿ, ಗುಳಿಗ ಮತ್ತು ಒಂಟಿ ಗುಳಿಗ ದೈವಗಳಿಗೆ ಕೋಲೋತ್ಸವ ಜರಗಲಿದ್ದು, ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ. ಫೆ. ೯ರ ಸಂಜೆ ಪರಿವಾರ ದೈವಗಳಿಗೆ ಪರ್ವ ಸೇವೆ ನಡೆಯಲಿದೆ.






