ಪರಿಶಿಷ್ಟ ಪಂಗಡಕ್ಕೆ ಮೊದಲು 25% ಮೀಸಲಾತಿ ನೀಡಿ ಪ್ರತ್ಯೇಕವಾಗಿ ಕರುಬ ಸಮುದಾಯಕ್ಕೆ 7.5 % ನೀಡಿ

 

ಚಿಕ್ಕಮಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ.25 ರಷ್ಟು ಮೀಸಲಾತಿ ನಿಗದಿ ಮಾಡುವುದರ ಜೊತೆಯಲ್ಲಿ ಕುರುಬ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.7.5 ಮೀಸಲಾತಿ ನಿಗದಿ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತ ಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೌಳ ಹಿರಿಯೂರು ಗ್ರಾಮದಲ್ಲಿ ನಡೆದ ಕನಕ ಜಯಂತ್ಯುತ್ಸವದಲ್ಲಿ ಅವರು ಭಾಗಿಯಾಗಿ ಮಾತನಾಡಿ, ನಾನು ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಲು ಎಂದೂ ವಿರೋಧಿಸಿಲ್ಲ, ನಾನು ಎಸ್ಟಿ ಮೀಸಲಾತಿಯ ವಿರೋಧಿಯಲ್ಲ. ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು ಅಧ್ಯಯನ ವರದಿ ಪೂರ್ಣಗೊಂಡ ಸರ್ಕಾರಕ್ಕೆ ವರದಿ ಸಲ್ಲಿಸಿದ ಮೇಲೆ ಎಸ್ಟಿ ಮೀಸಲಾತಿಗೆ ಆಗ್ರಹಿಸೋಣ ಎಂದಿದ್ದೇನೆಂದು ಸ್ಪಷ್ಟ ಪಡಿಸಿದರು.

ನಾನು ಪ್ರಧಾನ ಮಂತ್ರಿಯಾದರೂ ಸಾಮಾಜಿಕ ನ್ಯಾಯ ಬಿಟ್ಟು ರಾಜಕೀಯವಾಗಿ ಒಂದೇ ಒಂದು ತೀರ್ಮಾನ ಮಾಡುವುದಿಲ್ಲ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours