ಎಂಪಿ ಚುನಾವಣೆಗೆ ಹೆಚ್ಚಿನ ರಾಹುಲ್ ಜನಪ್ರಿಯತೆ , ಮೋದಿಗೆ ರಾಹುಲ್ ಪೈಪೋಟಿ

 

ನವದೆಹಲಿ,ಮೇ೨೪- ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಾಗಿರುವುದು ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಹಾಗೆ ಉಳಿದಿದೆ. ಈ ನಡುವೆ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳು ಅಧಿಕಾರಕ್ಕೆ ಒಂಬತ್ತು ವರ್ಷ ಪೂರ್ಣಗೊಳಿಸುತ್ತಿರುವಾಗ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ಸೇರಿದಂತೆ ಸರಣಿ ಚುನಾವಣೆಗಳಿಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮನಸ್ಥಿತಿ ನಿರ್ಣಯಿಸಲು ಸಮೀಕ್ಷೆ ನಡೆಸಲಾಗಿತ್ತು.
ಎನ್ ಡಿಟಿವಿ ಮತ್ತು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಹಭಾಗಿತ್ವದಲ್ಲಿ ವಿಶೇಷ ಸಮೀಕ್ಷೆಯ ಸಾರ್ವಜನಿಕ ಅಭಿಪ್ರಾಯದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಈ ತಿಂಗಳ ಮೇ ೧೦ ಮತ್ತು ೧೯ ರ ನಡುವೆ ೧೯ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಕರ್ನಾಟಕ ಚುನಾವಣೆಯ ನಂತರ ಆಡಳಿತಾರೂಢ ಬಿಜೆಪಿ ಪರಾಭವಗೊಂಡು ಕಾಂಗ್ರೆಸ್‌ಗೆ ಬಾರಿ ಬಹುಮತ ಬಂದ ನಂತರ ರಾಹುಲ್ ಗಾಂಧಿ ಅವರ ಜನ್ರಿಯತೆ ಹೆಚ್ಚಿದೆ.
ಕರ್ನಾಟಕದಲ್ಲಿ ಬಿಜೆಪಿ ಸೋತಿದ್ದರೂ, ಪ್ರಧಾನಿ ಮೋದಿಯವರ ಜನಪ್ರಿಯತೆ ಬಲವಾಗಿ ಉಳಿದಿದೆ ಮತ್ತು ಪಕ್ಷದ ಮತ ಹಂಚಿಕೆ ಸ್ಥಿರವಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ. ೪೩ ರಷ್ಟು ಜನ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಮೂರನೇ ಬಾರಿಗೆ ಗೆಲ್ಲಬೇಕು ಎಂದು ಹೇಳಿದ್ದಾರ
ಶೇ. ೩೮ ರಷ್ಟು ಮಂದಿ ಮತ್ತೆ ಅಧಿಕಾರಕ್ಕೆ ಬಿಜೆಪಿ ಬರುವುದು ಬೇಡ ಎಂದಿದ್ದಾರೆ. ಶೇ. ೪೦ ರಷ್ಟು ಮಂದಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದಿದ್ದಾರೆ.
ಬಿಜೆಪಿಯ ಮತಗಳಿಕೆ ೨೦೧೯ರಲ್ಲಿ ಶೇ.೩೭ ರಿಂದ ೨೦೨೩ ೩೯ ಕ್ಕೆ ಹೆಚ್ಚಾಗಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ್ದು ೨೦೧೯ ರಲ್ಲಿ ಶೇ. ೧೯ ರಿಂದ ೨೦೨೩ ರಲ್ಲಿ ೨೯ ಮತ್ತು ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಯಾರೆಲ್ಲಾ ರೇಸ್‌ನಲ್ಲಿ
ಶೇಕಡಾ ೪೩ ರಷ್ಟು ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದರೆ ಶೇ. ೨೯ಕ್ಕೂ ಅಧಿಕ ಜನರು ರಾಹುಲ್ ಗಾಂಧಿ ಕಡೆ ಒಲವು ತೋರಿದ್ದಾರೆ.
ಉಳಿದಂತೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಶೇ. ೪, ಅಖಿಲೇಶ್ ಯಾದವ್ ಶೇ ೩, ನಿತೀಶ್ ಕುಮಾರ್ ಶೇ.೧, ಮತ್ತು ಇತರರಿಗೆ ಶೇ ೧೮ ರಷ್ಟು ಮಂದಿ ಮುಂಚೂಣಿಯಲ್ಲಿದ್ದಾರೆ.

[t4b-ticker]

You May Also Like

More From Author

+ There are no comments

Add yours