ವೇಣೂರು: ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಎ. 2ರಿಂದ ಮೊದಲ್ಗೊಂಡು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿ ಏ. 6ರಂದು ಸಂಪನ್ನಗೊಂಡಿತು.
ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಏ.2ರಿಂದ ಧ್ವಜಾರೋಹಣ ಮೂಲಕ ಆರಂಭಗೊಂಡು ಬಳಿಕ ಚಂಡಿಕಾಯಾಗ, ಚೆಂಡು ಉತ್ಸವ, ದೀಪದ ಬಲಿ, ದರ್ಶನ ಬಲಿ, ಸವಾರಿ ಬಲಿ, ನಡುಬಲಿ, ಮಹಾರಥೋತ್ಸವ ನಡೆಯಿತು. ಏ. 6ರಂದು ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪಿ.ಕೃಷ್ಣಪ್ರಸಾದ್ ಅಸ್ರಣ್ಣ, ಪ್ರಧಾನ ಅರ್ಚಕ ಪಿ.ಪ್ರಕಾಶ್ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಹಕ್ಕೇರಿ, ಸದಸ್ಯರಾದ ಉಮೇಶ ಶೆಟ್ಟಿ ಕೊನೆರೊಟ್ಟುಗುತ್ತು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಅಶೋಕ್ ಆಚಾರ್ಯ ಸಿದ್ಧಕಟ್ಟೆ, ಸುರೇಶ ನೀರಪಲ್ಕೆ, ರಂಜಿನಿ ದಿವಾಕರ ಮಾದಾಯಿ, ಗೀತಾ ವಿಶ್ವನಾಥ ಉಮನೊಟ್ಟು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.





