ದುರ್ಗದ ಅಭಿವೃದ್ದಿ ಕೆಲಸಗಳು ಜನರಿಗೆ ಗೊತ್ತಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 583 ಕೋಟಿ ನೀಡಿದ್ದು  ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಶುದ್ದಕುಡಿಯುವ ನೀರು ಒದಗಿಸುವ ಕೆಲಸ ನಡೆಯುತ್ತಿದ್ದು ಶಾಶ್ವತವಾದ ಅಭಿವೃದ್ಧಿ  ಕೆಲಸ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ,ಜನರಿಗೆ ಗೊತ್ತಿದೆ  ಅಭಿವೃದ್ಧಿ  ಕೆಲಸಗಳು ಹೇಗೆ ಆಗಿದೆ ಎಂದು ಬಿಜೆಪಿ ಅಭ್ಯರ್ಥಿ ಶಾಸಕ  ಜಿ‌.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಇಂದು ಗಾರೆಹಟ್ಟಿ, ಜಯಲಕ್ಷ್ಮಿ ಬಡವಾಣೆ, ಪಂಡರಹಳ್ಳಿ, ಜಾನಕೊಂಡ, ದಂಡಿನಕುರುಬರಹಟ್ಟಿ, ಕಾಸವ್ವನಹಳ್ಳಿ , ಎಣ್ಣೆಗೆರೆ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ಮಾಡಿ ಮಾತನಾಡಿದರು‌.
ಬಿಜೆಪಿ ಸರ್ಕಾರದಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತರುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಜಯಲಕ್ಷ್ಮಿ ಬಡವಾಣೆ, ಗಾರೆಹಟ್ಟಿ, ಜಾನಕೊಂಡ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆಗಳು,ಕುಡಿಯುವ ನೀರು, ಚಕ್ ಡ್ಯಾಂ ,ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇನೆ. ವಿಶೇಷವಾಗಿ ನಗರಕ್ಕೆ ಕುಡಿಯುವ ನೀರು ಕೊರತೆ ಇದ್ದ ಸಂದರ್ಭದಲ್ಲಿ ಜನರು ಪರಿತಪಿಸುತ್ತಿದ್ದನ್ನು ಕಂಡು ವಿ.ವಿ.ಸಾಗರ ಮತ್ತು ಶಾಂತಿ ಸಾಗರದಿಂದ ನೀರು ತರುವ ಮೂಲಕ‌ ಶಾಶ್ವತ ಪರಿಹಾರ ಒದಗಿಸಿದ್ದೇನೆ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಕಳೆದ ಮೂರೂವರೆ ವರ್ಷದಲ್ಲಿ ಬಿಜೆಪಿ ಸಾಕಷ್ಟು ಅನುದಾನ ನೀಡಿದ್ದು ಸರ್ವತೋಮುಖ ಅಭಿವೃದ್ಧಿ ಮಾಡಿದ್ದು ಜನರು ನೋಡುತ್ತಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನರ ಜೊತೆಗಿದ್ದು ಕಷ್ಟ ಸುಖಗಳನ್ನು ಆಲಿಸುವ ಕೆಲಸವನ್ನು ಮಾಡಿದ್ದೇನೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಅಭಿಯಾನ ಮಾಡಿ ಜನರ ಜೀವ ರಕ್ಷಣೆ ಮಾಡಿದ್ದು ಜನರ ಆರೋಗ್ಯ ಕಾಪಾಡಲಾಗಿದೆ.
ಕೇಂದ್ರ ಸರ್ಕಾರ ಕೋವಿಡ್ ನಿಂದ ಜನರು ಹಸಿವಿನಿಂದ ಬದುಕು ನಡೆಸುವುದು ಕಷ್ಟ ಎಂಬುದನ್ನು ಅರಿತು ಉಚಿತವಾಗಿ ಅಕ್ಕಿ ಕೊಟ್ಟ ಹಸಿವು ಮುಕ್ತ ಭಾರತಕ್ಕೆ ನಮ್ಮ ನೆಚ್ಚಿನ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಮಾಡಿದೆ.
ರೈತರ ಮಕ್ಕಳಿಗೆ ಸ್ಕಾಲರ್ಶಿಪ್, ರೈತರಿಗೆ ಪ್ರೋತ್ಸಾಹ ಧನ, ಕಾರ್ಮಿಕರಿಗೆ ಪಿಂಚಣಿ, ಅಂಗವಿಕಲರ ಸಹಾಯಧನ, ಹಿರಿಯ ನಾಗರೀಕರ ಪಿಂಚಣಿ ಹೆಚ್ಚಳ ಸೇರಿ ಹಲವು ಜನಪರ ಕಾರ್ಯಕ್ರಮ ಬಿಜೆಪಿ ಸರ್ಕಾರ ನೀಡಿದೆ ಎಂದು ತಿಳಿಸಿದರು.
50 ಸಾವಿರ ದೇಣಿಗೆ: ಎಲ್ಲಾ ಕಡೆ ಅಭ್ಯರ್ಥಿಗಳು ಹಣ ನೀಡುತ್ತಾರೆ. ಆದರೆ ಚಿತ್ರದುರ್ಗ ಕ್ಷೇತ್ರದ ಜಯಲಕ್ಷ್ಮಿ ಬಡಾವಣೆಯ  ಕುಮಾರ್ ಮತ್ತು ಕಲಾವತಿ ಎಂಬುವವರು 50 ಸಾವಿರ ಹಣವನ್ನು ನೀಡಿ ನಿಮ್ಮ ಅಭಿವೃದ್ಧಿ ಕಾರ್ಯಗಳು ಯಾರು ಮಾಡಲು ಸಾಧ್ಯವಿಲ್ಲ.ನಿಮ್ಮ ಜೊತೆ ನಾವು ಮತ್ತು ನಮ್ಮ ಬಡಾವಣೆ ಜನರು ಸದಾ ಬೆಂಬಲಿಸುತ್ತಿದ್ದು ನಮ್ಮ  ಬಡಾವಣೆಯ ಚಿತ್ರಣ ಬದಲಿಸುವ ಕೆಲಸ ತಾವು ಮಾಡಿದ್ದು ನಿಮ್ಮ ಕೆಲಸ ಎಂದು ಮರೆಯಲಾಗಲ್ಲ ಎಂದು ಕುಮಾರ್  ಹೇಳಿದರು. ಈ ಸಂದರ್ಭದಲ್ಲಿ ವೀರಭದ್ರಪ್ಪ, ಎಸ್.ಕೆ.ಸುರೇಶ್ ಬಾಬು, ಕುಮಾರ್, ಕಲಾವತಿ, ನಾಗಭೂಷಣ್, ನಗರಸಭೆ ಸದಸ್ಯ  ಜಯ್ಯಣ್ಣ,ಪ್ರತಿಕ್ಷ, ಸಿದ್ದಪ್ಪ, ಪ್ರಾಣೇಶ್, ರಾಮಲಿಂಗಪ್ಪ ಇದ್ದರು.
[t4b-ticker]

You May Also Like

More From Author

+ There are no comments

Add yours