ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ: ಎನ್‌.ರಘುಮೂರ್ತಿ

 

 

 

ಚಳ್ಳಕೆರೆ: ದೇಶಿಯ ಸಂಸ್ಕೃತಿಗಳು ಮತ್ತು ಧಾರ್ಮಿಕರಾಧನೆಗಳು ಸಮಾಜದಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಪೂರಕವಾದಂತ ಬೆಳವಣಿಗೆಗಳಾಗಿವೆ  ಎಂದು  ಎನ್ ರಘುಮೂರ್ತಿ ಹೇಳಿದರು.

ಇಂದು ಚಳ್ಳಕೆರೆ ನಗರದಲ್ಲಿ ಹಾದು ಹೋಗುತ್ತಿರುವ    ಗಾದ್ರಿ ಪಾಲನಾಯಕ ಬುಡಕಟ್ಟು ಸಂಸ್ಕೃತಿಯ ಮೆರವಣಿಗೆ ಉದ್ದೇಶಿ ಮಾತನಾಡಿ ಜಿಲ್ಲೆಯ ಈ ತಾಲೂಕುಗಳಲ್ಲಿ ಅದೆಷ್ಟೇ ಅನಕ್ಷರತೆ ಮತ್ತು ಬಡತನ ಇದ್ದಾಗೆಯೂ ಕೂಡ ಆಚಾರ ವಿಚಾರ ಮತ್ತು ಸಂಸ್ಕೃತಿಗಳಲ್ಲಿ ಈ ಜನರು ಶ್ರೀಮಂತವಾಗಿದ್ದಾರೆ ಪರಸ್ಪರ ಸಾಮರಸ್ಯ ಸಹ ಬಾಳ್ವೆ ಮತ್ತು ಪರೋಪಕಾರವಂತ ಮಾನವೀಯ ಗುಣಗಳು ಪ್ರತಿಯೊಬ್ಬರಲ್ಲೂ ಮನೆ ಮಾಡಿವೆ ಇಂಥ ವೈಶಿಷ್ಟ್ಯ ಪೂರ್ಣವಾದಂತ ಆಚರಣೆಗಳು ಮತ್ತು ಮಾನವೀಯ ಗುಣಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮುಂದಿನ ಯುವ ಪೀಳಿಗೆಯೂ ಕೂಡ ಈ ಸಂಸ್ಕೃತಿಗಳನ್ನ ಮುಂದುವರಿಸ್ಕೊಂಡು ಹೋಗುವುದು ಅಗತ್ಯವಾಗಿದೆ. challakere

ಸಂಸ್ಕೃತಿ ಆಚರಣೆ ಜೊತೆಗೆ ಈ ಸಮುದಾಯಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಮತ್ತು ರೈತರುಗಳು ಕೂಡ ವೈಜ್ಞಾನಿಕ ಮತ್ತು ತಾಂತ್ರಿಕ ಕೃಷಿಗಳನ್ನು ಅಳವಡಿಸಿಕೊಂಡು ಉತ್ಕೃಷ್ಟವಾದ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಆಗಿ ಸಮುದಾಯಗಳು ತಮ್ಮ ಬದುಕಿನಲ್ಲಿ ಹೊಸ ಭಾಷೆಯನ್ನು ಬರೆಯಬೇಕೆಂದು ಆಶಿಸಿದರು.

ನೂರಾರು ಬಂಡಿ ಗಾಡಿಯಲ್ಲಿ ದೇವತೆಗಳನ್ನು ಕೂರಿಸಿಕೊಂಡು ಬುಡಕಟ್ಟು ಸಂಸ್ಕೃತಿಯ ಮೆರವಣಿಗೆಯಲ್ಲಿ ದೇವರ ಎತ್ತುಗಳನ್ನು ಪೂಜಿಸಿಕೊಂಡು ಭಕ್ತಿ ಭಾವ ಪರವಶರಾಗಿ ಗಾದ್ರಿಪಾಲ ನಾಯಕ ದೇವರನ್ನು ಆರಾಧಿಸಿದರು ಈ ಸಂದರ್ಭದಲ್ಲಿ ಶಶಿಧರ್ ರೆಡ್ಡಿ ದೇವರಾಜ್ ರೆಡ್ಡಿ ಕ್ಯಾಸಕ್ಕಿ ಪಾಪಯ್ಯ ಸಹಸ್ರರು ಭಕ್ತಾದಿಗಳು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours