ಅಳಿಯೂರು: ಸ್ವರ್ಣಕೇದಗೆ ಸೇಣೆರಬೆಟ್ಟು ಮನೆ ಪಿಣಪಿಲ ಇಲ್ಲಿಯ ಶ್ರೀಮತಿ ಪುಷ್ಪಾ ರಮಾನಾಥ ಸಾಲ್ಯಾನ್ ಮತ್ತು ಮಕ್ಕಳು ಸೇವೆಯಾಗಿ ಏರ್ಪಡಿಸಿರುವ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಫೆ. 17ರಂದು ಸಂಜೆ 6-00 ಗಂಟೆಯಿಂದ ನಡೆಯಲಿದೆ.
ವಿಎಸ್ ಎರೇಂಜರ್ಸ್ ಅಳಿಯೂರು ಇದರ ಮಾಲಕರಾಗಿರುವ ಇವರು ದಿ. ಚಂದಯ್ಯ ಪೂಜಾರಿ-ಶೀಮತಿ ಓಬಕ್ಕೆ ಪೂಜಾರ್ತಿ ಅವರ ಸ್ಮರಣಾರ್ಥ ಈ ಪುಣ್ಯ ಕಥಾ ಭಾಗದ ಯಕ್ಷಗಾನವನ್ನು ಆಡಿ ತೋರಿಸುತ್ತಿದ್ದಾರೆ. ಕಲಾಭಿಮಾನಿಗಳು ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.





