ವೇಣೂರು: 2026ರ ಜ. 9 ಮತ್ತು 10ರಂದು ನಡೆಯಲಿರುವ ಶ್ರೀ ದೈವ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಪರ್ವಸೇವೆ ಹಾಗೂ ದೊಂಪದಬಲಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ. 28ರಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಿನರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಪಡ್ಡಂದಡ್ಕದ ಗಡುಸ್ಥಳ ಕಟ್ಟೆಯಲ್ಲಿ ಜರಗಿತು.
ಪ್ರಸನ್ನ ಆರ್. ಹೆಗ್ಡೆ ಪೆರಿಂಜೆ ರಾಜ್ಯಗುತ್ತು, ಸನತ್ಕುಮಾರ್ ಸೇಮಿತ ಪೆರಿಂಜೆ ಮಾಗಣೆಗುತ್ತು, ಎಂ. ಮಹಾವೀರ ಜೈನ್ ಮೂಡುಕೋಡಿಗುತ್ತು, ಬಾಲ್ಯ ಶಂಕರ ಭಟ್, ಶ್ರೀಪತಿ ಭಟ್ ಸಂಪಿಗೆದಡಿ, ಗಿರೀಶ್ ಪೂಜಾರಿ ನ್ಯೂ ಅಲೆಕ್ಕಿ, ಐದು ಗ್ರಾಮಗಳ ಗುತ್ತುಬರ್ಕೆಯವರು, ಗ್ರಾಮಸ್ಥರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಭಾಗವಹಿಸಿದ್ದರು. ಕೆ. ಮಹಾವೀರ ಜೈನ್ ಸ್ವಾಗತಿಸಿ, ಸತೀಶ್ ಉಜಿರ್ದಡ್ಡ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ನೂಯಿ ವಂದಿಸಿದರು.






