ಹೊಸಂಗಡಿ: ಸಾಧನಾ ಶ್ರೀ ಮಹಿಳಾ ಮಂಡಳಿಯ ಉದ್ಘಾಟನಾ ಕಾರ್ಯಕ್ರಮವು ಪಡ್ಡಂದಡ್ಕ ಸಮುದಾಯ ಭವನದಲ್ಲಿ ನಡೆಯಿತು.
ಮಹಿಳಾ ಮಂಡಳಿ ಅಧ್ಯಕ್ಷೆ ಪ್ರತಿಭಾ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಮೇಶ್ ಕುಲಾಲ್, ಕುಶ ಪಿ. ಪೂಜಾರಿ, ದಿನೇಶ್ ನೂಯಿ ಉಪಸ್ಥಿತರಿದ್ದರು. ಭಕ್ತಿಗೀತೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಬಹುಮಾನದ ಪ್ರಾಯೋಜಕತ್ವ ತುಳಸಿ ದಿನೇಶ್ ವಹಿಸಿದ್ದರು. ಶ್ರೀಮತಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಶೋಭಾ ಹೆಗ್ಡೆ ಸ್ವಾಗತಿಸಿದರು. ನಂತರ ಭಗವದ್ಗೀತೆಯ ಪಾರಾಯಣ ಕಾರ್ಯಕ್ರಮ ನಡೆಯಿತು. ಲತಾ ರಾಮದಾಸ್ ನಾಯಕ್ ಲಘು ಉಪಹಾರ ವ್ಯವಸ್ಥೆ ಮಾಡಿದ್ದರು.






