ಹೊಸಂಗಡಿ: ಸಾಧನಾ ಶ್ರೀ ಮಹಿಳಾ ಮಂಡಲ ಉದ್ಘಾಟನಾ ಕಾರ್ಯಕ್ರಮವು ಪಡ್ಡಂದಡ್ಕ ಶ್ರೀ ಮಂಜುನಾಥೇಶ್ವರ ಸಮುದಾಯ ಭವನದಲ್ಲಿ ಡಿ. ೨೧ರಂದು ನಡೆಯಿತು.
ರಾಷ್ಟ್ರಸೇವಿಕಾ ಸಮಿತಿಯ ಮಂಗಳೂರು ವಿಭಾಗದ ಜಿಲ್ಲಾ ಕಾರ್ಯವಾಹಿಕೆ ಶ್ರೀಮತಿ ಗಿರಿಜಾ ಭಟ್ ಅವರು ಉದ್ಘಾಟನೆ ನೆರವೇರಿಸಿ, ಶುಭ ಹಾರೈಸಿದರು.
ಮಹಿಳಾ ಮಂಡಳಿ ಅಧ್ಯಕ್ಷೆ ಪ್ರತಿಭಾ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಜನ ಮಂಡಳಿ ಕಾರ್ಯದರ್ಶಿ ರಮೇಶ್ ಕುಲಾಲ್, ಕೋಶಾಧಿಕಾರಿ ಕುಶ ಪಿ. ಪೂಜಾರಿ, ದಿನೇಶ್ ನೂಯಿ ಉಪಸ್ಥಿತರಿದ್ದರು.
ಸಾಧನಾ ಶ್ರೀ ಮಹಿಳಾ ಮಂಡಲದ ಕಾರ್ಯದರ್ಶಿ ನಳಿನಾಕ್ಷಿ ಸುಧಾಕರ್ ವರದಿ ವಾಚಿಸಿದರು. ಆಟೋಟ ವಿಜೇತರ ಪಟ್ಟಿಯನ್ನು ರಕ್ಷಿತಾ ಆರ್. ವಾಚಿಸಿದರು.
ಶ್ರೀಮತಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಶೋಭಾ ಅರುಣ್ ಹೆಗ್ಡೆ ಸ್ವಾಗತಿಸಿದರು. ಲತಾ ರಾಮದಾಸ್ ನಾಯಕ್ ವಂದಿಸಿದರು. ನಂತರ ಭಗವದ್ಗೀತೆಯ ಪಾರಾಯಣ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.






