ನೀರು ಕೊಟ್ಟ ನಿಮಗೆ ನಮ್ಮ ಬೆಂಬಲ, ಜೆಡಿಎಸ್ ತೊರೆದು ಶಾಸಕ ಟಿ.ರಘುಮೂರ್ತಿ ಬೆಂಬಲಿಸಿದ ಒಕ್ಕಲಿಗ ಮುಖಂಡರು

 

ಪರಶುರಾಂಪುರ: ನೀರು ಕೊಟ್ಟ  ನಿಮಗೆ ನಮ್ಮ ಬೆಂಬಲ, ಚಕ್ ಡ್ಯಾಂ ಗಳ ನಿರ್ಮಾಣದಿಂದ  ಆಗಿರುವ ಅನುಕೂಲವನ್ನು  ನೆನೆದು ನೂರಾರು ಒಕ್ಕಲಿಗರ ಮುಖಂಡರು ಇಡೀ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಾನು ಮಾಡಿದ ಅಭಿವೃದ್ಧಿ ಗೆ  ಜನರು ತೋರುತ್ತಿರುವ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಪರಶುರಾಂಪುರ ಹೋಬಳಿಯ ಪುರ್ಲಹಳ್ಳಿ  ಗ್ರಾಮದಲ್ಲಿ  ಜೆಡಿಎಸ್ ಪಕ್ಷದ ಮುಖಂಡರು ಜೆಡಿಎಸ್ ತೊರೆದು ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು  ಶಾಸಕರು  ಮಾತನಾಡಿದರು.

ಹತ್ತಾರು  ವರ್ಷಗಳ ಕಾಲ ನೀರಿಲ್ಲದೇ ಪರಿತಪಿಸುತ್ತಿದ್ದರು. ಆದರೆ ನಾನು ಶಾಸಕನಾದ ಮೇಲೆ ಸುಮಾರು ಬೃಹತ್ 3 ಚಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಹಿತ ಕಾಯುವ ಕೆಲಸ ಮಾಡಿದ್ದೇನೆ. ಸಾವಿರಾರು ಎಕರೆ ತೋಟಗಾರಿಕೆ ಮಾಡಲು ಚಕ್ ಡ್ಯಾಂ ನೀರಿನಿಂದ ಅಂತರ್ಜಲ ಹೆಚ್ಚಿ ಸಹಕಾರಿಯಾಗಿದೆ ಎಂದು ರೈತರು ಸಂತಸ ಹಂಚಿಕೊಳ್ಳುತ್ತಿರುವುದು ನನಗೆ ನನ್ನ ಕೆಲಸದ ಮೇಲೆ ತೃಪ್ತಿ ತಂದಿದೆ ಎಂದರು.

ಪರಶುರಾಂಪುರ ಹೋಬಳಿಯಲ್ಲಿ  ಜೆಡಿಎಸ್ ಪಕ್ಷದ ಎಲ್ಲಾ ಹಳ್ಳಿಯಲ್ಲಿ   ಒಕ್ಕಲಿಗ  ಮುಖಂಡರು ಈ ಬಾರಿ  ಚುನಾವಣೆಯಲ್ಲಿ  ನೀರು ಕೊಟ್ಟ  ನಿಮಗೆ ನಮ್ಮ  ಬೆಂಬಲ  ಎಂದು ಒಕ್ಕಲಿಗ ಮುಖಂಡರು ಅಭಯ ನೀಡುತ್ತಿದ್ದಾರೆ. ಕಳೆದ ಬಾರಿ ತಪ್ಪು ಮಾಡಿದ್ದೇವೆ. ಅಂತಹ  ಪಕ್ಷ ಮತ್ತೆ ಮಾಡಲ್ಲ . ನಿಮ್ಮ ಜೊತೆ ನಾವು ಬೆಂಬಲವಾಗಿ ನಿಂತು  ಅತ್ಯಧಿಕ ಮತಗಳನ್ನು ನೀಡುತ್ತೇನೆ ಎಂದು ಒಕ್ಕಲಿಗ ಮುಖಂಡರು , ರೈತರು ಸೇರಿ ಎಲ್ಲಾ ವರ್ಗದ ಜನರು ನನಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ನನಗೆ ಸಂತೋಷ ತಂದಿದೆ.

ನಾನು ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಪರಶುರಾಂಪುರ ಭಾಗಕ್ಲೆ ಚಕ್ ಡ್ಯಾಂ ನಿರ್ಮಾಣ ಮಾಡಲು ಅಡ್ಡಿ ಆತಂಕಗಳು ಬಂದವು ಆದರೆ ಜನರಿಗೆ ನೀರು ನೀಡಲೇಬೇಕು ಎಂಬ ಹೆಬ್ಬಯಕೆ  ನನ್ನಗಿದ್ದರಿಂದ ದಾರಿಯನ್ನು ಹುಡುಕಿ ಕುಡಿಯುವ ನೀರಿಗಾಗಿ ನೀರು ಹರಿಸಬೇಕು ಎಂದು ನಮ್ಮ ಸರ್ಕಾದಲ್ಲಿ ಮಾಡಿಸುವ ಮೂಲಕ 0.25 ನೀರನ್ನು ಹರಿಸಿ ಸಾವಿರಾರು ಎಕರೆ ಕೃಷಿ ಮಾಡಲು ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಸಹ ವೇದಾವತಿ ಪಾತ್ರದಲ್ಲಿ ನೀರು ನಿಂತಿದ್ದು ರೈತರಿಗೆ ವರದಾನವಾಗಿದೆ.

ನಮ್ಮ  ಒಕ್ಕಲಿಗ ಮುಖಂಡರು ರೈತರು ಹೇಳುವ ಪ್ರಕಾರ ಪ್ರತಿ ವರ್ಷ ಬೇಸಿಗೆಯಲ್ಲಿ ಬೊರವೆಲ್ ಹಾಕಿಸಿ ರೋಸಿದ್ದೇವು. ಚಕ್ ಡ್ಯಾಂ ನಿರ್ಮಾಣದಿಂದ ರೈತರ ಲಕ್ಷಾಂತರ ರೂಪಾಯಿ ಹಣ ಉಳಿದಿದೆ. ರೈತರು ಸಾಲಗಾರರಾಗುವುದು ತಪ್ಪಿದೆ ಎಂದು ತಿಳಿಸುತ್ತಿದ್ದಾರೆ.  ಇನ್ನು ಎರಡು ಚಕ್ ಡ್ಯಾಂ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಎಲ್ಲಾ ಜನಾಂಗದವರನ್ನು ಸಮಾನವಾಗಿ ಕಾಣುತ್ತೇನೆ‌. ನಿಮ್ಮ ಸೇವೆ ನಾನು ಸದಾ ಬದ್ದವಾಗಿದ್ದು  ನಿಮ್ಮ ಬೆಂಬಲದಿಂದ ಮತ್ತಷ್ಟು ದೊಡ್ಡ ಜವಬ್ದಾರಿಗಳು ನನ್ನ ಮೇಲಿದೆ. ನಿಮ್ಮ ಅಭಿವೃದ್ಧಿ ಮತ್ತು ಕ್ಷೇತ್ರ ಅಭಿವೃದ್ಧಿ ಕಡೆಗೆ ನನ್ನ ಗಮನ ನಿಮ್ಮ ಪ್ರೀತಿ ಹೀಗೆ ಇರಲಿ. ಚುನಾವಣೆಯಲ್ಲಿ ಹೆಚ್ಚಿನ ಮತ ಕೊಡಿಸುವ ಮೂಲಕ ನನ್ನ ಶಕ್ತಿ ಹೆಚ್ಚಿಸಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಪುರ್ಲಹಳ್ಳಿ ಗ್ರಾಮದ ಜೆ.ಡಿ.ಎಸ್. ಪಕ್ಷದ ಮುಖಂಡರುಗಳಾದ ಸಂದೀಪ, ಮಧುಕುಮಾರ, ಹೊನ್ನೇಶ, ಶಿವಣ್ಣ, ನರಸಿಂಹ, ತಿಪ್ಪೇಸ್ವಾಮಿ, ನಾಗರಾಜ್, ಎನ್ ತಿಪ್ಪೇಸ್ವಾಮಿ, ಕರಿಯಪ್ಪ, ಶಿವಣ್ಣರನ್ನು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ  ಪರಶುರಾಮ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕಿರಣ್ ಶಂಕರ್, ಹಾಲಿ ಅಧ್ಯಕ್ಷರಾದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಮುಖಂಡರುಗಳಾದ ಕೇಶವಣ್ಣ, ವೀರಭದ್ರಪ್ಪ, ಜಗಳೂರು ಸ್ವಾಮಿ , ಗುಜ್ಜಾರಪ್ಪ, ಮುಖಂಡರು, ಕಾರ್ಯಕರ್ತರು ಮತ್ತು ಯುವಕರು, ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours