ವೇಣೂರು: ಮೂಡುಕೋಡಿ ಗ್ರಾಮದ ಬೊಮ್ಮನಟ್ಟ ವಿಶ್ವನಾಥ ಪೂಜಾರಿ ಅವರ ಮನೆಯ ಅಂಗಳದಲ್ಲಿ ಭಾರಿ ಗಾತ್ರದ ಬ್ಲ್ಯಾಕ್ ಕೋಬ್ರಾ (ಕಾಳಿ೦ಗ ಸರ್ಪ) ಕಾಣಿಸಿಕೊಂಡಿದ್ದು, ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.
ಮನೆ ಮಂದಿಯನ್ನು ಕ೦ಡ ಸರ್ಪ ಗದ್ದೆಯ ಪಕ್ಕದ ಗುಹೆಯಲ್ಲಿ ಅವಿತುಕೊಂಡದನ್ನು ಗಮನಿಸಿದ ಸ್ಥಳಿಯ ನಿವಾಸಿ ಸ೦ದೇಶ್ ಪಿ.ಎನ್. ಸ್ಥಳಿಯ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಅನೂಪ್ ಅವರು ವೇಣೂರು ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿದರು. ಬ್ಲ್ಯಾಕ್ ಕ್ರೋಬ್ರಾ ಎ೦ದು ಖಚಿತಗೊಂಡು ವೇಣೂರು ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್ ಮಾರ್ಗದರ್ಶನದ೦ತೆ ಕೋಬ್ರಾ ಹಿಡಿಯಲು ಕಾವಳಕಟ್ಟೆಯ ಸ್ನೇಕ್ ಪ್ರಸಾದ್ ಅವರನ್ನು ಕರೆಸಿಕೊ೦ಡು ಕಾಳಿ೦ಗನನ್ನು ಸೆರೆ ಹಿಡಿದು ರಕ್ಷಿಸಲಾಯಿತು. ಅಪಾಯಕಾರಿ ಕೋಬ್ರಾನನ್ನು ಕೆಲವೇ ಘಂಟೆಗಳಲ್ಲಿ ಸೆರೆ ಹಿಡಿಯಲು ತುರ್ತಾಗಿ ಸಹಕರಿಸಿದ ಸದಸ್ಯ ಅನೂಪ್ ಜೆ. ಪಾಯಸ್ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅರಣ್ಯ ಇಲಾಖಾ ಸಿಬ್ಬ೦ದಿ ರೋನಾಲ್ಡ್ ಡಿಸೋಜ ಸೇರಿ ಹಲವರು ಸಹಕರಿಸಿದರು.





