ವೇಣೂರು: ವೇಣೂರು ಸನಿಹದ ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ವಿವೇಕಾನಂದ ಸೇವಾ ಟ್ರಸ್ಟ್ನ ಸ್ಥಾಪಕಾಧ್ಯಕ್ಷರು, ಕೀರ್ತಿಶೇಷ ಮಾರಗುತ್ತು ಯಂ. ವಿಜಯರಾಜ ಅಧಿಕಾರಿಯವರ ಹುಟ್ಟುಹಬ್ಬ ಹಾಗು ಪುಣ್ಯಸ್ಮರಣೆಯ ಕಾರ್ಯಕ್ರಮ ನಡೆಯಿತು.
ನೊಂದವರ, ದೀನರ ಕಣ್ಣೀರು ಒರಸಿ ಬಾಳಿಗೆ ಬೆಳಕು ತೋರಿಸಿದ ಹಿರಿಯರು, ಧಾರ್ಮಿಕ ಮುಖಂಡರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯಂ. ವಿಜಯರಾಜ ಅಧಿಕಾರಿ ಇವರ ಸದಾ ಸವಿನೆನಪು ಉಳಿಯುವಂತೆ ಈ ಟ್ರಸ್ಟ್ ನ ಅಡಿಯಲ್ಲಿ ನಿರಂತರ ಸಮಾಜ ಸೇವೆ ಗೈಯಲಾಗುವುದು ಎಂದು ಟ್ರಸ್ಟ್ ನ ಕಾರ್ಯಾಧ್ಯಕ್ಷ ಡಾ. ಧರಣೇಂದ್ರ ಜೈನ್ ಅವರು ಈ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ವಿಜಯರಾಜ ಅಧಿಕಾರಿಯವರು ಕೀರ್ತಿಶೇಷ ವಿಜಯರಾಜ ಅಧಿಕಾರಿಯವರಿಗೆ ಪುಣ್ಯ ನಮನ ಸಲ್ಲಿಸಿ ಪುಷ್ಪಾಂಜಲಿ ಸಮರ್ಪಣೆ ಮಾಡಿದರು. ಹಾಗು ಸೇವಾಶ್ರಮದ ಆಶ್ರಮವಾಸಿಗಳಿಗೆ ಸಿಹಿಊಟ ಹಂಚಲಾಯಿತು.
ಡಾ. ಸಂಧ್ಯಾ ಧರಣೇಂದ್ರ ಜೈನ್, ಕೋಶಾಧಿಕಾರಿ ಕೃಷ್ಣಾನಂದ ಭಟ್, ಸದಸ್ಯರಾದ ಭಾಸ್ಕರ ಪೈ, ಭರತ್ರಾಜ್ ಜೈನ್, ಪಶುವೈದ್ಯ ಸುಕೀರ್ತ್ ಜೈನ್, ಸಂಜೀವ ಪೂಜಾರಿ ಮೂಡ್ಲ, ರಾಜೇಂದ್ರ. ವಿ., ಜಿನೇಶ್ ಜೈನ್ ಮತ್ತಿತ್ತರು ಉಪಸ್ಥಿತರಿದ್ದರು. ಸೇವಾಶ್ರಮದ ಸಂಚಾಲಕರಾದ ಹೊನ್ನಯ್ಯ ಕಾಟಿಪಳ್ಳ ಎಲ್ಲರನ್ನು ಸ್ವಾಗತಿಸಿದರು.





