ಮೂಡುಬಿದಿರೆ: ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಮೀನಾಕ್ಷಿ ಭಟ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ತೋರಿದ ಮೀನಾಕ್ಷಿ ಭಟ್ ಅವರು ಮೂಡುಬಿದಿರೆಯ ವಕೀಲ ಸಂದೇಶ್ ಭಟ್ ಅವರ ಪತ್ನಿಯಾಗಿದ್ದು, ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕರಾದ ಪುರುಷೋತ್ತಮ ಭಟ್ ಹಾಗೂ ಲತಾ ಪುರುಷೋತ್ತಮ ಭಟ್ ಅವರ ಸೊಸೆಯಾಗಿದ್ದಾರೆ.






