ಪಡ್ಡಂದಡ್ಕದಿಂದ ಭವ್ಯ ಮೆರವಣಿಗೆ, ಕುಣಿತ ಭಜನೆ ಮೆರುಗು, ಆಮಂತ್ರಣ ಪತ್ರಿಕೆ ಬಿಡುಗಡೆ
ವೇಣೂರು: ಕರಿಮಣೇಲು ಗ್ರಾಮದ ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಸಾನಿಧ್ಯಗಳ ಪುನರ್ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಎ. 5ರಂದು ನೂತನ ಶಿಲಾಮಯ ಶ್ರೀ ನಾಗದೇವರ ೧೯ ಬಿಂಬಗಳನ್ನು ಜಲಾಧಿವಾಸ ಮಾಡುವ ಕಾರ್ಯಕ್ರಮವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕುತ್ಲೂರು ಶಿಲ್ಪಕಾಲ ಕೇಂದ್ರದಿಂದ ತೆರೆದ ವಾಹನದಲ್ಲಿ ಚೆಂಡೆ, ಕೊಂಬು, ವಾಧ್ಯದೊಂದಿಗೆ ವೇಣೂರಿನ ಮಾರ್ಗವಾಗಿ ಪಡ್ಡಂದಡ್ಕಕ್ಕೆ ಆಗಮಿಸಿತು. ಪಡ್ಡಂದಡ್ಕ ಪೇಟೆಯಿಂದ ಕುಣಿತ ಭಜನೆ ತಂಡ, ಚೆಂಡೆ, ಕೊಂಬು, ವಾಧ್ಯ ಹಾಗೂ ಸ್ವಾಗತ ಕಲಶಗಳೊಂದಿಗೆ ೫೦೦ ಕ್ಕೂ ಹೆಚ್ಚಿನ ಭಕ್ತದಿಗಳು ಭವ್ಯಮೆರವಣಿಗೆ ಮೂಲಕ ಮಂಜನಬೆಟ್ಟು ಸಾಧ್ಯಕ್ಕೆ ಆಹ್ವಾನಿಸಿ, ಬಿಂಬಗಳ ಜಲಾಧಿವಾಸ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ
ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಜಿನರಾಜ್ ಜೈನ್ ಪದ್ಮಾಂಬ ಬಿಡುಗಡೆ ಮಾಡಿದರು. ರವಿರಾಜ್ ಜೈನ್, ಸತ್ಯರಾಜ್ ಹೆಗ್ಡೆ, ಸನತಕುಮಾರ್ ಜೈನ್ ಸೇರಿದಂತೆ ಊರಿನ ಪ್ರಮುಖರು, ಗ್ರಾಮಸ್ಥರು, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ಉಜಿರ್ದಡ್ಡು ನಿರ್ವಹಿಸಿದರು. ಪ್ರಮೋದ್ ಜೈನ್ ಪಾಡಾರು ಮೆರವಣಿಗೆಯಲ್ಲಿ ಸಹಕರಿಸಿದರು.
ಬಹುಪ್ರಾಚೀನವಾದ ಶ್ರೀ ನಾಗಬ್ರಹ್ಮ ದೇವರ ಹಾಗೂ ಪರಿವಾರ ಸಾಧ್ಯಗಳ ಆರೂಢವು ಜೀರ್ಣೋದ್ಧಾರಗೊಂಡು ಮೇ ೨೪ರಂದು ಪ್ರತಿಷ್ಠಾಪನೆ ನಡೆಯಲಿದೆ.





