ಬಂಟ್ವಾಳ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ದುರ್ಗಾಮಹಾಲಕ್ಷ್ಮೀ, ವಿಠೋಭ ರುಕ್ಮಾಯಿ ಹಾಗೂ ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವವು ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಫೆ. 26ರಂದು ಜರಗಲಿದೆ.
ಅಂದು ಬೆಳಿಗ್ಗೆ 6-00 ಗಂಟೆಯಿಂದ ತೆಂಗಿನಕಾಯಿ ಗಣಯಾಗ, ಬೆಳಿಗ್ಗೆ 9-00 ಗಂಟೆಯಿಂದ ಚಂಡಿಕಾಯಾಗ, ನವಕ ಕಲಶ, ಭಜನಾ ಸಂಕೀರ್ತನೆ, ಮಹಾಪೂಜೆ ಬಳಿಕ ಮಧ್ಯಾಹ್ನ 12-15ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 4-00 ಗಂಟೆಗೆ ದುರ್ಗಾನಮಸ್ಕಾರ ಪೂಜೆ ಆರಂಭವಾಗಲಿದೆ.
ಸಂಜೆ 6-00ರಿಂದ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಫೆ. 27ರಂದು ಪ್ರಾತಃಕಾಲದಲ್ಲಿ ಸಿಯಾಳಾಭಿಷೇಕ ಹಾಗೂ ನಾಗತಂಬಿಲ ಸೇವೆ ನಡೆಯಲಿದೆ ಎಂದು ಆಡಳಿತ ಟ್ರಸ್ಟ್ ಪ್ರಕಟಣೆ ತಿಳಿಸಿದೆ.





